ಅಕ್ರಮ ಮದ್ಯ ಮಾರಾಟ: ಆರೋಪಿಯ ಬಂಧನ
Update: 2017-09-27 17:59 IST
ಚಿಕ್ಕಮಗಳೂರು, ಸೆ.27: ಅಕ್ರಮ ಮದ್ಯ ಮಾರಾಟ ಮಾಡಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಇಬ್ಬರು ಆರೋಪಿಗಳಲ್ಲಿ ಓರ್ವನನ್ನು ಬೀರೂರು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಹಿರೇನಲ್ಲೂರು ಬಳಿಯ ಅರೇಹಳ್ಳಿ ಗ್ರಾಮದ ಸಿದರಾಮಪ್ಪ(35) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಈತನ ಜತೆಗಿದ್ದ ಅರೇಹಳ್ಳಿ ಗ್ರಾಮದ ಶಾಂತ(40) ಆರೋಪಿ ಪರಾರಿಯಾಗಿದ್ದಾನೆ. ಬಂಧಿತ ಆರೋಪಿಯಿಂದ 1687 ರೂ.ಗಳ ಮೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿದ್ದು, ಅಕ್ರಮ ಮದ್ಯ ಸಸಾಗಿಸಲು ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.