ಕೆಎಸ್ಸಾರ್ಟಿಸಿ ನೌಕರ ಆತ್ಮಹತ್ಯೆ
Update: 2017-09-27 22:50 IST
ಮಂಡ್ಯ, ಸೆ.27: ಪ್ರೀತಿಸಿದ ಹುಡುಗಿ ಬೇರೊಬ್ಬರೊಂದಿಗೆ ಮದುವೆಯಾದ ಕಾರಣ ಮನನೊಂದು ಕೆಎಸ್ಸಾರ್ಟಿಸಿ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾಂಡವಪುರದಲ್ಲಿ ನಡೆದಿದೆ.
ಪಾಂಡವಪುರ ಕೆಎಸ್ಸಾರ್ಟಿಸಿ ಡಿಪೋದ ಕಿರಿಯ ಸಹಾಯಕ ಎನ್.ಎಸ್.ಮನು(29) ಆತ್ಮಹತ್ಯೆ ಮಾಡಿಕೊಂಡವರೆಂದು ಗುರುತಿಸಲಾಗಿದೆ.
ಈತ ಪ್ರೀತಿಸುತ್ತಿದ್ದ ಯುವತಿ ಕಳೆದ 3 ತಿಂಗಳ ಹಿಂದೆ ಬೇರೊಬ್ಬರೊಂದಿಗೆ ಮದುವೆಯಾದುದ್ದೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.
ಮಂಗಳವಾರ ತಡರಾತ್ರಿ ಮನು ತನ್ನ ತಾಯಿಯನ್ನು ತಂಗಿಯ ಮನೆಗೆ ಕಳುಹಿಸಿ ಮಾತ್ರೆ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥನಾಗಿದ್ದ. ಮನೆಗೆ ಬಂದ ತಂಗಿಯ ಮಗ ತಕ್ಷಣ ಆತನನ್ನು ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.