ಗೋವಾದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ: ಕರವೇ ಪ್ರತಿಭಟನೆ
ಚಿಕ್ಕಮಗಳೂರು, ಸೆ.27: ಗೋವಾ ರಾಜ್ಯದಲ್ಲಿ ವಾಸಿಸುತ್ತಿರುವ ಕನ್ನಡಿಗರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರವು ಮಧ್ಯಸ್ಥಿಕೆ ವಹಿಸಲು ಒತ್ತಾಯಿಸಿ ದ್ರುವತಾರೆ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ನಗರದ ಆಜಾದ್ ಪಾರ್ಕ್‍ನಲ್ಲಿ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಗೋವಾ ರಾಜ್ಯದ ಬೈನಾ ಬೀಚಿನಲ್ಲಿ ಸುಮಾರು 40 ವರ್ಷಗಳಿಂದ ವಾಸವಿದ್ದಾರೆ. ಆಧಾರ್ ಆರ್ಡ್ ಪಡಿತರ ಚೀಟಿ ಹೊಂದಿ ಆ ಸರ್ಕಾರಕ್ಕೆ ತೆರಿಗೆಯನ್ನು ಪಾವತಿಸುತ್ತಿದ್ದ ಸುಮಾರು 55 ಕುಟುಂಬಗಳನ್ನು ಅಲ್ಲಿನ ಜಿಲ್ಲಾಡಳಿತವು ಬೆಳ್ಳಂಬೆಳಗ್ಗೆಯೇ ಒಕ್ಕಲೆಬ್ಬಿಸಿದೆ. ಕನ್ನಡಿಗರನ್ನು ಒಕ್ಕಲೆಬ್ಬಿಸುವ ಜತೆಗೆ ದೇವಸ್ಥಾನಗಳನ್ನು ಕೆಡವಿ ಹಾಕಿ ದೌರ್ಜನ್ಯ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಧ್ರುವತಾರೆ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಡಿ.ಎಚ್. ಮೋಹನ್ ಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಸನ್ನಗೌಡ, ಕಾರ್ಯದರ್ಶಿ ಚಂದ್ರಶೇಖರ್, ರಾಬರ್ಟ, ಸತೀಶ್, ಮಾಸ್ತೇಗೌಡ, ಜೋಸೇಫ್, ವಿಜಯ ಕುಮಾರ್, ವರ್ತಕರ ಘಟಕದ ರಮೇಶ್ ಕುಮಾರ್ ಹಾಗೂ ಅಂಕುಶ್ ಗೌಡ ಮತ್ತಿತರರಿದ್ದರು.