ಸೊರಬ: ರೊಹಿಂಗ್ಯಾ ಮುಸ್ಲಿಮರ ಹತ್ಯೆ ಖಂಡಿಸಿ ಪ್ರತಿಭಟನೆ
ಸೊರಬ, ಸೆ.27: ಮ್ಯಾನ್ಮಾರ್ ದೇಶದಲ್ಲಿ ರೊಹಿಂಗ್ಯಾ ಮುಸ್ಲಿಮರು ಹಾಗೂ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹತ್ಯೆಯನ್ನು ಖಂಡಿಸಿ, ಮುಸ್ಲಿಂ ಹಿತರಕ್ಷಣಾ ವೇದಿಕೆ ತಾಲೂಕು ಘಟಕದಿಂದ ನೂರಾರು ಮುಸ್ಲಿಮರು ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಎಲ್.ಬಿ. ಚಂದ್ರಶೇಖರ್ ಮೂಲಕ ಪ್ರಧಾನ ಮಂತ್ರಿಗಳಿಗೆ ಬುಧವಾರ ಮನವಿ ಸಲ್ಲಿಸಿದರು.
ಅಮಾಯಕರ ಮೇಲೆ ಮ್ಯಾನ್ಮಾರ್ ದೇಶದ ಸೈನಿಕರು ನಡೆಸುತ್ತಿರುವ ಕೃತ್ಯ ಆಮಾನವೀಯವಾಗಿದ್ದು, ದೌರ್ಜನ್ಯದಿಂದಾಗಿ ರೋಹಿಂಗ್ಯಾ ಮುಸ್ಲಿಮರು ಆ ದೇಶವನ್ನು ತೊರೆಯುತ್ತಿದ್ದಾರೆ. ಈ ಕೃತ್ಯದಿಂದಾಗಿ ವಸತಿಗಾಗಿ ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಕೆಂದ್ರ ಸರಕಾರ ಮಧ್ಯ ಪ್ರವೇಶಿಸಬೇಕು. ಜನಾಂಗೀಯ ದ್ವೇಷವನ್ನು ನಿಲ್ಲಿಸ ದಿದ್ದಲಿ ಆ ದೇಶದೊಂದಿಗಿನ ರಾಜ ತಾಂತ್ರಿಕ ಸಂಬಂಧಗಳನ್ನು ಭಾರತ ಕಡಿದು ಕೊಳ್ಳುತ್ತದೆ ಎಂಬ ಎಚ್ಚರಿಕೆಯನ್ನು ನೀಡಬೇಕೆಂದು ಪತ್ರಿಭಟನಾಕಾರರು ಆಗ್ರಹಿಸಿದರು.
ಮಾನವ ಹಕ್ಕುಗಳ ಉಲ್ಲಂಘನೆ ಸಂಬಂಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಕುರಿತು ತನಿಖೆ ನಡೆಸಿ ದೌರ್ಜನ್ಯ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿ ಮನವಿ ಸಲ್ಲಿಸಿದರು.
ಸಮಿತಿಯ ತಾಲೂಕು ಅಧ್ಯಕ್ಷ ವಕೀಲ ಸೈಯದ್ ಅಹ್ಮದ್, ಉಪಾಧ್ಯಕ್ಷ ಸಿಫತುಲ್ಲಾ, ಪ್ರಧಾನ ಕಾರ್ಯದರ್ಶಿ ಬಿ.ಮುಖ್ತಾರ್ ಅಹ್ಮದ್, ಪ್ರಮುಖ ರಾದ ಎಚ್.ಎಂ.ಬಾಬು ಸಾಬ್ ಆನವಟ್ಟಿ, ಹುಸೇನ್ ಸಾಬ್ ಅಂಡಗಿ, ರಸೂಲ್ ಅಹ್ಮದ್ ಉಳವಿ, ಕೆ.ಕೆ. ಸಯ್ಯದ್ ರಫೀಕ್, ಇಂತಿಖಾಬ್ ಆಲಂ, ರೋಷನ್ ಕುಪ್ಪಗಡ್ಡೆ, ಕುಪ್ಪಗಡ್ಡೆ ರಶೀದ್, ನಯಾಝ್ ಅಹ್ಮದ್, ಹನೀಫ್ ದಂಡಾವತಿ ಬ್ಲಾಕ್, ಬಿ.ಹಸನ್ ಹೊಸಪೇಟೆ ಹಕ್ಲು ಮತ್ತಿತರರಿದ್ದರು.