ಅಂಗಡಿ ಬೀಗ ಮುರಿದು ಕಳವು
Update: 2017-09-27 23:19 IST
ಚಿಕ್ಕಮಗಳೂರು, ಸೆ.27: ಅಂಗಡಿಯ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಸುಮಾರು 5.32 ಲಕ್ಷ ರೂ.ಗಳ ವಿವಿಧ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಕಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಡೂರು ಪಟ್ಟಣದ ಜಿ.ಆರ್.ಸತೀಶ್ ಕುಮಾರ್ ಎಂಬವರ ಸಪ್ತಗಿರಿ ಎಂಟರ್‍ಪ್ರೈಸಸ್‍ನಲ್ಲಿ ಕಳ್ಳತನ ಕೃತ್ಯ ನಡೆದಿದೆ.
ಸತೀಶ್ ಕುಮಾರ್ ಇತ್ತೀಚೆಗೆ ಅಂಗಡಿಗೆ ಬೀಗ ಹಾಕಿಕೊಂಡು ತಮಿಳುನಾಡಿಗೆ ಅಗತ್ಯ ಕೆಲಸದ ನಿಮಿತ್ತ ತೆರಳಿದ್ದರು. ವಾಪಾಸ್ ಬಂದು ನೋಡಿದಾಗ ಅಂಗಡಿ ಬೀಗ ಮುರಿದಿರುವುದು ಕಂಡು ಬಂತು. ದರೋಡೆಕೋರರು ಅಂಗಡಿಯ ಒಳಗಿದ್ದ ಸ್ಯಾನಿಟರಿ, ಮೋಟಾರ್ಸ್, ಯುಪಿಎಸ್, ವಾಟರ್ ಪ್ರಯೂರಿಫಯರ್, ಸಿಪಿ ಪಿಟ್ಟಿಂಗ್ಸ್ ಗಳನ್ನು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ ಸುಮಾರು 5.32 ಲಕ್ಷ ರೂ.ಗಳು ಎಂದು ಅಂದಾಜಿಸಲಾಗಿದೆ.