×
Ad

ಸತತ ಸುರಿದ ಭಾರೀ ಮಳೆಯಿಂದ ಕುಸಿದ ಗೋಡೆ: ಪ್ರಾಣಾಪಾಯದಿಂದ ಮನೆ ಮಂದಿ ಪಾರು

Update: 2017-09-28 22:37 IST

ಮೈಸೂರು, ಸೆ.28: ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಶಿಥಿಲಗೊಂಡಿದ್ದ ಹಂಚಿನ ಮನೆ ಕುಸಿದಿರುವ ಘಟನೆ ಗುರುವಾರ ಬೆಳಗ್ಗೆ ಸುಮಾರು 4 ಗಂಟೆ ವೇಳೆಗೆ ಸಂಭವಿಸಿದೆ.

ಈ ಅಪಘಾತ ನಡೆದ ವೇಳೆ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ನಗರದ ನಜರ್ ಬಾದ್ ನ ಜಟ್ಟಿ ಬೀದಿಯ ನಿವಾಸಿ ರಾಜೇಶ್ ಅಲಿಯಾಸ್ ಬಾಬು ಎಂಬವರ ಮನೆ ಮಳೆಯಿಂದಾಗಿ ಕುಸಿದಿದ್ದು, ಗೋಡೆ ಕುಸಿಯುತ್ತಿದ್ದಂತೆ ಎಚ್ಚರಗೊಂಡ ಮನೆಯವರು ತಕ್ಷಣ ಮನೆಯಿಂದ ಹೊರ ಓಡಿಬಂದಿದ್ದಾರೆ. ಹೀಗಾಗಿ ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಬಗ್ಗೆ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News