ಅ.1ರಂದು ಮೈಸೂರು ಜಿಲ್ಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವರ ಪ್ರವಾಸ
Update: 2017-09-28 22:49 IST
ಮೈಸೂರು,ಸೆ.28: ವೈದ್ಯಕೀಯ ಶಿಕ್ಷಿಣ ಸಚಿವರಾದ ಡಾ.ಶರಣಪ್ರಕಾಶ್ ಆರ್. ಪಾಟೀಲ್ ಅವರು ಅಕ್ಟೋಬರ್ 1 ರಂದು ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಅಂದು ಬೆಳಗ್ಗೆ 9ಕ್ಕೆ ಮೈಸೂರಿಗೆ ಆಗಮಿಸುವರು. ಬೆಳಗ್ಗೆ 10ಕ್ಕೆ ರಸ್ತೆ ಮೂಲಕ ಮರಗಲ್ಲಿ ಗ್ರಾಮಕ್ಕೆ ಭೇಟಿ ನೀಡುವರು. ಬೆಳಗ್ಗೆ 11ಕ್ಕೆ ಕಡಕೊಳ ಗ್ರಾಮ ಜಯಪುರ ಹೋಬಳಿ ಮೈಸೂರು ರೈಲ್ವೇ ಸ್ಟೇಷನ್ ಹತ್ತಿರ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಸಂಜೆ 4ಕ್ಕೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ರಾತ್ರಿ 7ಕ್ಕೆ ಮೈಸೂರಿನಿಂದ ಹೈದ್ರಾಬಾದ್‍ಗೆ ತೆರಳುವರೆಂದು ಪ್ರಕಟನೆ ತಿಳಿಸಿದೆ.