×
Ad

​ದಲಿತ ಕಾಲನಿ ಸಂಪರ್ಕ ರಸ್ತೆಯಲ್ಲಿನ ಶೌಚಾಲಯ ತೆರವಿಗೆ ನೋಟಿಸ್

Update: 2017-09-29 00:13 IST

ಚಿಕ್ಕಬಳ್ಳಾಪುರ, ಸೆ.28: ತಾಲೂಕಿನ ಕೊಂಡೆನಹಳ್ಳಿ ಗ್ರಾಮದ ದಲಿತ ಕಾಲನಿಯ ಸಂಪರ್ಕ ರಸ್ತೆಗೆ ಅಡ್ಡಲಾಗಿ ಶೌಚಾಲಯ ನಿರ್ಮಿಸಿ ಉದ್ದಟತನ ಮೆರೆದ ಇದೇ ಗ್ರಾಮದ ವ್ಯಕ್ತಿಗೆ ಅಧಿಕಾರಿಗಳು ಶೌಚಾಲಯ ತೆರವುಗೊಳಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.

ಕೊಂಡೆನಹಳ್ಳಿ ಗ್ರಾಮದ ದಲಿತ ಕಾಲನಿಯ ಸಂಪರ್ಕ ರಸ್ತೆಗೆ ಅಡ್ಡಲಾಗಿ ಶೌಚಾಲಯ ನಿರ್ಮಿಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿರುವ ಕುರಿತು ವಾರ್ತಾಭಾರತಿಯಲ್ಲಿ ಸುದ್ದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡು ಗುರುವಾರ ಗ್ರಾಮಕ್ಕೆ ಭೇಟಿ ನೀಡಿದ ತಹಶೀಲ್ದಾರ್ ನರಸಿಂಹ ಮೂರ್ತಿ, ಇಒ ಸಂಜೀವಪ್ಪ ಸೇರಿದಂತೆ ಇತರರು ಪರಿಶೀಲನೆ ನಡೆಸಿದ್ದಾರೆ.

ರಸ್ತೆಗೆ ಅಡ್ಡಲಾಗಿ ಶೌಚಾಲಯ ನಿರ್ಮಿಸಿರುವುದನ್ನು ತೆರವುಗೊಳಿಸುವಂತೆ ಗ್ರಾಪಂ ಪಿಡಿಒ ಮಾತಿಗೂ ಬೆಲೆ ನೀಡದ ವೆಂಕಟೇಶನ ವಿರುದ್ಧ ನೋಟೀಸ್ ಜಾರಿ ಮಾಡಿದ್ದು, ಗ್ರಾಮಸ್ಥರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸಿದರೆ ಕಾನೂನು ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಸಲಾಗಿದೆ.

ಈ ಸಂಭರ್ದಲ್ಲಿ ಆರ್‌ಐ ಶ್ರೀನಿವಾಸ್, ಪಿಡಿಒ ಮಮತಾ, ದಲಿತ ಸಂಘಟನೆಯ ತಿಪ್ಪೇನಹಳ್ಳಿ ನಾರಾಯಣಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News