×
Ad

ಭಾರತದ ಶೇ.25 ರಷ್ಟು ಭೂಮಿ ಮರಳುಗಾಡು ಆಗಲಿದೆ: ಚಿತ್ರನಟಿ ವೈಶಾಲಿ

Update: 2017-09-30 18:05 IST

ಮೂಡಿಗೆರೆ, ಸೆ.30: ಮುಂದಿನ 100 ವರ್ಷಗಳಲ್ಲಿ ವಿಶ್ವದಲ್ಲಿ ಜನಸಂಖ್ಯೆಯ ಶೇ.50 ಜನರಿಗೆ ಮಾತ್ರ ಕುಡಿಯುವ ನೀರು ದೊರಕಲಿದ್ದು, ಭಾರತದ ಶೇ.25 ರಷ್ಟು ಭೂಮಿ ಮರಳುಗಾಡು ಆಗಲಿದೆ ಎಂದು ಚಿತ್ರನಟಿ ವೈಶಾಲಿ ತಿಳಿಸಿದರು.

 ಅವರು ಶನಿವಾರ ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗ ಮಂದಿರದ ಆವರಣದಲ್ಲಿ ‘ನದಿ ಪಾತ್ರ ಉಳಿಸಲು ರ್ಯಾಲಿ ಪಾರ್ ರೀವರ್’ ಹಮ್ಮಿಕೊಂಡಿದ್ದ ಜಾಥದಲ್ಲಿ ಮಾತನಾಡಿದರು. ಹಿಂದಿನ 100 ವರ್ಷಗಳಿಗೆ ಹೋಲಿಸಿದರೆ ಒಬ್ಬ ವ್ಯಕ್ತಿಗೆ ಇಂದು ಕೇವಲ ಶೇ.25 ರಷ್ಷು ಮಾತ್ರ ದೊರಕುತ್ತಿದೆ. ಭವಿಷ್ಯದಲ್ಲಿ ನದಿಗಳನ್ನು ಉಳಿಸದಿದ್ದರೆ ಭೂಮಿಯ ಸಕಲ ಜೀವಿಗಳು ಸಂಕಷ್ಟ ಅನುಭವಿಸಲಿದೆ. ಈ ಕಾರಣದಿಂದ ನಮ್ಮ ಸುತ್ತಲಿನ ಎಲ್ಲಾ ನದಿ ಮೂಲಗಳನ್ನು ಉಳಿಸುವುದು ಪ್ರತಿಯೊಬ್ಬರ ಅದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

 ಪ್ರತಿಯೊಬ್ಬ ನಾಗರಿಕರು ನದಿ ದಡೆಗಳಲ್ಲಿ ಗಿಡ-ಮರಗಳನ್ನು ನೆಡುವ ಮೂಲಕ ರಕ್ಷಣೆಗೆ ಮುಂದಾಗಬೇಕಾಗಿದೆ. ಗಿಡ ಮರಗಳನ್ನು ನೆಡಲು ನಿರ್ಲಕ್ಷಿಸಿಸಿದರೆ ದೊಡ್ಡ ಅನಾಹುತ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

   ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ನದಿ ಮೂಲಗಳನ್ನು ಉಳಿಸಲು ಎಲ್ಲರೂ ಕೈಜೋಡಿಸಬೇಕು. ಸರ್ಕಾರಿ ಭೂಮಿಗಳಲ್ಲಿ ಹಣ್ಣು-ಹಂಪಲುಗಳ ಮರ ಬೆಳೆದು ಕಾಡನ್ನು ಕಡ್ಡಾಯವಾಗಿ ಬೆಳೆಸಿದಲ್ಲಿ ಪ್ರಾಣಿ ಪಕ್ಷಗಳಿಗೆ ಆಹಾರವಾಗುತ್ತದೆ. ಅಲ್ಲದೆ ಉತ್ತಮ ಮಳೆಯಾಗುತ್ತದೆ , ಕೃಷಿ ಭೂಮಿಯಲ್ಲಿ ಹಣ್ಣಿನ ಗಿಡಗಳನ್ನು ರೈತರು ಬೆಳೆಯುವಂತೆ ಪ್ರೋತ್ಸಾಹ ನೀಡುವ ಮೂಲಕ ಮತ್ತು ನದಿ ಪಾತ್ರದ 1 ಕಿ.ಮೀ. ವ್ಯಾಪ್ತಿಯಲ್ಲಿ ಮರಗಳ ಹೊದಿಕೆ ನಿಮಾಣ ಮಾಡಲು ತಾವು ಸಹಕಾರ ನೀಡುವುದಾಗಿ ತಿಳಿಸಿದರು.

  ಕಾರ್ಯಕ್ರಮವನ್ನು ಲಯನ್ಸ್ ಸಂಘದ ಸಂಸ್ಥಾಪಕ ಅಧ್ಯಕ್ಷ ಎನ್.ಎಲ್.ಸುಂದರೇಶ್ವರ್ ಗಿಡಗಳಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಇಷಾ ಪೌಂqಷನ್ ಅರುಣಿಮಾ, ಚಿತ್ರನಟಿ ರಿಶಿಕಾ ಸಿಂಗ್, ಎಂಎಲ್‍ಸಿಗಳಾದ ಡಾ.ಮೋಟಮ್ಮ, ಎಂ.ಕೆ.ಪ್ರಾಣೇಶ್, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿದರು.

  ಈ ಸಮಯದಲ್ಲಿ ಜೆಡಿಎಸ್‍ನ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಇಷಾ ಪೌಂqಷನ್‍ನ ಸುಹಾಸ್ ಹ್ಯಾರಗುಡ್ಡೆ,  ವಿವೇಕ್ ಪುಣ್ಯಮೂರ್ತಿ, ಭರತ್ ಮಡ್ಡಿಕೆರೆ, ಸತ್ಯಪ್ಪ, ಮಹಮದ್ ಅಸಿಮ್ ಅಲ್ದೂರು, ಪೃಥ್ವಿ ಗೌತಹಳ್ಳಿ, ಜಯರಾಮ್ ದೇವೃಂದÀ, ದೀಪಕ್ ದೇವೃಂದ, ಶಿವರಾಜ್, ನಂದೀಶ್, ಬಿಜೆಪೊ ಮುಖಂಡ ದೀಪಕ್ ದೊಡ್ಡಯ್ಯ, ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News