ಕೊಳ್ಳೇಗಾಲ ; ಬೈಕ್‍ಗಳ ಮುಖಾಮುಖಿ ಢಿಕ್ಕಿ : ಓರ್ವ ಮೃತ್ಯು
Update: 2017-09-30 18:17 IST
ಕೊಳ್ಳೇಗಾಲ,ಸೆ.30: ಬೈಕ್‍ಗಳ ನಡುವೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಸವಾರನೊಬ್ಬ ಸಾವನ್ನಪ್ಪಿದ್ದು, ಇಬ್ಬರು ಬೈಕ್ ಸವಾರರಿಗೆ ತೀವ್ರ ಗಾಯವಾಗಿರುವ ಘಟನೆ ತಾಲ್ಲೂಕಿನ ಮರಿಯಪುರ ಬಳಿ ಜರುಗಿದೆ.
ತಾಲ್ಲೂಕಿನ ಇಕ್ಕಡಹಳ್ಳಿ ಗ್ರಾಮದ ಬಸವರಾಜು ಎಂಬಬುವರ ಮಗ ಕೆಂಪರಾಜು ಅಲಿಯಾಸ್ ಸುನೀಲ್(25) ಮೃತ ವ್ಯಕ್ತಿ. ಅದೇ ಗ್ರಾಮದ ಚಂದ್ರು ಹಾಗೂ ಪಾಳ್ಯ ಗ್ರಾಮದ ಫಾರೆಸ್ಟ್ ವಾಚರ್ ರಾಜೇಂದ್ರ ಎಂಬವವರಿಗೆ ಕಾಲು, ಕೈ ಹಾಗೂ ಮುಖದ ಭಾಗಗಳಲ್ಲಿ ಗಾಯವಾಗಿದೆ.
ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಶವಗಾರದಲ್ಲಿ ಮೃತದೇಹವನ್ನು ಪರೀಕ್ಷೆ ನಡೆಸಿ ನಂತರ ವಾರಸುದಾರರಿಗೆ ನೀಡಲಾಯಿತು. ಪ್ರಕರಣವನ್ನು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ಸಿಪಿಐ ರಾಜಣ್ಣ ಅವರು ತನಿಖೆ ಕೈಗೊಂಡಿದ್ದಾರೆ.