ದೇವಸ್ಥಾನದಿಂದ ಕದ್ದ ಹುಂಡಿಯನ್ನು ನಡುರಸ್ತೆಯಲ್ಲಿಯೇ ಬಿಟ್ಟು ಹೋದ ಕಳ್ಳರು !
Update: 2017-09-30 19:13 IST
ದಾವಣಗೆರೆ,ಸೆ.30: ದೇವಸ್ಥಾನವೊಂದರ ಹುಂಡಿಯನ್ನು ಕದ್ದ ಕಳ್ಳರು ನಂತರ ಅದನ್ನು ನಡುರಸ್ತೆಯಲ್ಲಿಯೇ ಬಿಟ್ಟು ಓಡಿಹೋದ ಘಟನೆ ದಾವಣಗೆರೆ ತಾಲೂಕಿನ ಸಿದ್ದನೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮರುಳಸಿದ್ದೇಶ್ವರ ದೇವಸ್ಥಾನದಲ್ಲಿ ತಡರಾತ್ರಿ ಕಳ್ಳರು ದೇವಸ್ಥಾನದ ಹುಂಡಿ ಕದ್ದಿದ್ದಾರೆ. ನಂತರ ಅದನ್ನು ಬೈಕ್ ಮೇಲೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಕಳ್ಳರ ಬೈಕ್‍ಗೆ ಗ್ರಾಮದ ಹೊರವಲಯದಲ್ಲಿ ಕಾರೊಂದು ಢಿಕ್ಕಿಯಾಗಿದೆ. ಇದರಿಂದ ಹೆದರಿದ ಕಳ್ಳರು ಕದ್ದ ಹುಂಡಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ದಾವಣಗೆರೆ ಗ್ರಾಮೀಣ ಠಾಣೆ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.