×
Ad

ಆಫ್ರಿಕನ್ ಧೈತ್ಯ ಶಂಖು ಹುಳು ಕುರಿತಾಗಿ ಸಾಮೂಹಿಕ ಜಾಗೃತಿ ಆಂದೋಲನ

Update: 2017-09-30 19:28 IST

ಚಿಕ್ಕಮಗಳೂರು, ಸೆ.30: ಇತ್ತೀಚೆಗೆ ಜಿಲ್ಲೆಯ ಕಾಫಿ ತೋಟಗಳಲ್ಲಿ ಕಂಡುಬಂದಿರುವ ಆಫ್ರಿಕನ್ ಧೈತ್ಯ ಶಂಖು ಹುಳು ಮತ್ತು ಬಿಳಿಕಾಂಡ ಕೊರಕ ಕೀಟಗಳ ಹತೋಟಿ ಕ್ರಮಗಳ ಬಗ್ಗೆ ಕಾಫಿ ಮಂಡಳಿಯು ಆಲ್ದೂರಿನ ಆಲ್ದೂರು ಕಾಫಿ ಪ್ಲಾಂಟರ್ಸ್ ಕ್ಲಬ್‍ನಲ್ಲಿ ಸಾಮೂಹಿಕ ಜಾಗೃತಿ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. 

ಕಾಫಿ ಮಂಡಳಿಯ ಸಂಪರ್ಕಾಧಿಕಾರಿ ಅಬೂಬಕರ್ ಸಿದ್ದೀಖ್ ಮಾತನಾಡಿ, ಕಾಫಿ ತೋಟಗಳಲ್ಲಿ ಆಫ್ರಿಕನ್ ಧೈತ್ಯ ಶಂಖ ಹುಳುವಿನಿಂದಾಗುವ ಹಾನಿಗಳು ಮತ್ತು ಅದರ ಹತೋಟಿ ಕ್ರಮಗಳನ್ನು ಕೇಂದ್ರ ಕಾಫಿ ಸಂಶೋಧನಾಲಯದ ವಿಜ್ನಾನಿಗಳಾದ ಡಾ.ಸೀತಾರಾಮ ರವರು ದ್ರಶ್ಯಾವಳೀ ಮೂಲಕ ವಿವರಿಸಿದರು. 

ವಸ್ತಾರೆ ಹೋಬಳಿ, ಆವತಿ ಹೋಬಳಿ, ಖಾಂಡ್ಯ ಹೋಬಳಿ, ಗೋಣಿಬೀಡು ಹೋಬಳಿ ಮತ್ತು ಬಾಳೂರು ಹೋಬಳಿಗಳ ಕಾಫಿ ಬೆಳೆಗಾರರ ಸಂಘದ ಅದ್ಯಕ್ಷರು ಮತ್ತು ಪಧಾದಿಕಾರಿಗಳು ಭಾಗವಹಿಸಿದ್ದರು. ಸುಮಾರು 85 ಕಾಫಿ ಬೆಳೆಗಾರರು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

ಕಾಫಿ ಮಂಡಳಿ ಉಪನಿರ್ದೇಕ ತಿಮ್ಮರಾಜು ಕಾಫಿ ಮಂಡಳಿಯಿಂದ ದೊರಕುವ ಸಹಾಯಧನದ ಕುರಿತು ತಿಳಿಸಿದರು. ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾದ್ಯಕ್ಷ ಕೆ.ಯು. ರತೀಶ್‍ಕುಮಾರ್, ಕಾಫಿ ಮಂಡಳಿಯ ಸದಸ್ಯರಾದ ಕೆ.ಕೆ.ಮನುಕುಮಾರ್, ಮಾಜಿ ಸದಸ್ಯರಾದ ಡಿ.ಎಮ್.ವಿಜಯ ಪಾಲ್ಗೊಂಡಿದ್ದರು. ಕಾಫಿ ಮಂಡಳಿಯ ವಿಸ್ತರಣಾ ನಿರೀಕ್ಷಕ ಮಹೇಶ್ವರಮೂರ್ತಿ ನಿರೂಪಿಸಿ, ವಂದಿಸಿದರು.

ಅರೇನೂರು: ಆಲ್ದೂರು ಹೋಬಳಿಯ ಅರೆನೂರು ಗ್ರಾಮದ ಸಮುದಾಯ ಭವನದಲ್ಲಿ ಆಫ್ರಿಕನ್ ಧೈತ್ಯ ಶಂಖು ಹುಳು ಮತ್ತು ಬಿಳಿಕಾಂಡ ಕೊರಕ ಕೀಟಗಳ ಹತೋಟಿ ಕ್ರಮಗಳ ಬಗ್ಗೆ ಸಾಮೂಹಿಕ ಜಾಗೃತಿ ಆಂದೋಲನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಹಿರಿಯ ಮತ್ತು ಕಾಫಿ ಬೆಳೆಗಾರ ವೀರೇಗೌಡ ವಹಿಸಿದ್ದರು. ಕಾಫಿ ಮಂಡಳಿಯ ಸಂಪರ್ಕಾಧಿಕಾರಿ ಅಬೂಬಕರ್ ಸಿದ್ದೀಖ್ ಸಭೆಯ ಉದ್ದೇಶವನ್ನು ತಿಳಿಸಿದರು. ಕಾಫಿ ತೋಟಗಳಲಿ ಆಫ್ರಿಕನ್ ಧೈತ್ಯ ಶಂಖ ಹುಳುವಿನಿಂದಾಗುವ ಹಾನಿಗಳು ಮತ್ತು ಅದರ ಹತೋಟಿ ಕ್ರಮಗಳನ್ನು ಕೇಂದ್ರ ಕಾಫಿ ಸಂಶೋಧನಾಲಯದ ವಿಜ್ನಾನಿಗಳಾದ ಡಾ.ಸೀತಾರಾಮ ರವರು ದ್ರಶ್ಯಾವಳೀ ಮೂಲಕ ವಿವರಿಸಿದರು.

ಕಾಫಿ ಮಂಡಳಿಯ ಸದಸ್ಯರಾದ ಕೆ.ಕೆ.ಮನುಕುಮಾರ್‍ಅತಿಥಿಗಳಾಗಿ ಆಗಮಿಸಿದ್ದರು. ಆಲ್ದೂರು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಸುರೇಶ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾಫಿ ಮಂಡಳಿಯ ವಿಸ್ತರಣಾ ನಿರೀಕ್ಷಕ ಮಹೇಶ್ವರಮೂರ್ತಿ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News