ಕಾಂಗ್ರೆಸ್ ಅಭ್ಯರ್ಥಿಗೆ ಒಮ್ಮತದ ಬೆಂಬಲ:ಬಿ.ರಾಮಕೃಷ್ಣ
ಮದ್ದೂರು, ಸೆ.30: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಟಿಕೇಟ್ ನೀಡುತ್ತದೆ ಆ ಅಭ್ಯರ್ಥಿಗೆ ಒಮ್ಮತದಿಂದ ಕೆಲಸ ಮಾಡಲಾಗುವುದು ಎಂದು ವಿಧಾನಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ ತಿಳಿಸಿದ್ದಾರೆ.
ತೊಪ್ಪನಹಳ್ಳಿ ಕೆರೆಗೆ ಶನಿವಾರ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ನಾನೂ ಸೇರಿದಂತೆ ಮಾಜಿ ಶಾಸಕರಾದ ಮಧು ಜಿ.ಮಾದೇಗೌಡ, ಕಲ್ಪನಾಸಿದ್ದರಾಜು, ಡಾ.ಮಹೇಶ್‍ಚಂದ್ ಹಾಗು ಜಿಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್ ಯಾರಿಗೆ ಟಿಕೇಟ್ ನೀಡಿದರೂ ಒಗ್ಗಟ್ಟಿನಿಂದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುತ್ತೇವೆ ಎಂದರು.
ಇದಕ್ಕೂ ಮುನ್ನ ಗ್ರಾಮದ ನಾರಾಯಣಸ್ವಾಮಿ ದೇವಾಲಯದಿಂದ ದಶಾವತಾರ ಪಟ್ಟಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು ಮತ್ತು ದೇವಾಲಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪುಟ್ಟಸ್ವಾಮಿ, ಕೆಂಪಣ್ಣ, ಶಿವಮಾದು, ನವೀನ್, ಅಂಕರಾಜು, ಮಲ್ಲೇಶ್, ರಾಜಶೇಖರ್, ಕೃಷ್ಣ, ನಿಂಗೇಗೌಡ, ಮಲ್ಲರಾಜು, ಇತರ ಮುಖಂಡರು ಹಾಜರಿದ್ದರು.