×
Ad

ಅ. 2 : ಸುಂಟಿಕೊಪ್ಪ ಮಲೆಯಾಳಿ ಸಮಾಜದ ವತಿಯಿಂದ 11ನೇ ವರ್ಷದ ಓಣಂ ಆಚರಣೆ

Update: 2017-09-30 22:09 IST

ಸುಂಟಿಕೊಪ್ಪ, ಸೆ.30: ಸುಂಟಿಕೊಪ್ಪ ಮಲೆಯಾಳಿ ಸಮಾಜದ ವತಿಯಿಂದ 11ನೇ ವರ್ಷದ ಓಣಂ ಆಚರಣೆಯನ್ನು ಅ. 2 ರಂದು ಬೆಳಿಗ್ಗೆ 10.30 ಗಂಟೆಗೆ ಮಂಜನಾಥಯ್ಯ ಮಿನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಮಲೆಯಾಳಿ ಸಮಾಜದ ಅಧ್ಯಕ್ಷ ಪಿ.ಸಿ.ಮೋಹನ್ ತಿಳಿಸಿದ್ದಾರೆ.

“ನ್ಯೂಸ್ ಗ್ಯಾಲರಿಯಲ್ಲಿ” ಕಛೇರಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಸುಂಟಿಕೊಪ್ಪ ಮಲೆಯಾಳಿ ಸಮಾಜದ ಅಧ್ಯಕ್ಷ ಪಿ.ಸಿ. ಮೋಹನ್ ಮಾತನಾಡಿ ಕಳೆದ 10 ವರ್ಷಗಳಿಂದ ಮಲೆಯಾಳಿ ಸಮಾಜ ಭಾಂದವರಿಗಾಗಿ ವೈಶಿಷ್ಟ ಪೂರ್ಣ ಕಾರ್ಯಕ್ರಮ ಹಾಗೂ ಭಾಂದವರ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ದಿಸೆಯಲ್ಲಿ ಸಮಾರಂಭವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು.

ಅ.2ರಂದುಸಮಾರಂಭದ ಉದ್ಘಾಟನೆಯನ್ನು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ನೇರವೇರಿಸಲಿರುವರು. ಮುಖ್ಯ ಭಾಷಣಕಾರರಾಗಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಕೆ.ಲೋಕೇಶ್ ಆಗಮಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಮಲೆಯಾಳಿ ಸಮಾಜದ ಅಧ್ಯಕ್ಷರಾದ ಪಿ.ಸಿ.ಮೋಹನ್ ವಹಿಸಲಿದ್ದಾರೆ. 

ಮುಖ್ಯ ಅತಿಥಿಗಳಾಗಿ ಹಾಸನ ಗ್ರಾಹಕರ ವ್ಯಾಜ್ಯ ವೇದಿಕೆಯ ಅಧ್ಯಕ್ಷರಾದ ಎ.ಲೋಕೇಶ್ ಕುಮಾರ್ ಮಾಜಿ ಜಿ.ಪಂ.ಅಧ್ಯಕ್ಷ ಪಿ.ಎಂ. ವಿಜಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್, ಕೊಡಗು ಜಿಲ್ಲಾ ಕಾಂಗ್ರೆಸ್ ಪಕ್ಷದ ಶಿವುಮಾದಪ್ಪ, ಜಿ.ಪಂ.ಸದಸ್ಯ ಪಿ.ಎಂ.ಲತೀಫ್, ರಾಜ್ಯ ಎಐಟಿಯುಸಿ ಕಾರ್ಯದರ್ಶಿನಾಪಂಡ ಮುತ್ತಪ್ಪ, ಸುಂಟಿಕೊಪ್ಪ ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್,ಸುಂಟಿಕೊಪ್ಪ ವಿಎಸ್‍ಎಸ್‍ಎನ್ ಅಧ್ಯಕ್ಷ ಎನ್.ಸಿ.ಪೊನ್ನಪ್ಪ (ಕ್ಲೈವಾ), ರಾಮಸೇವಾ ಸಮಿತಿ ಕಾರ್ಯದರ್ಶಿ ಸುದರ್ಶನ್ ನಾಯ್ಡು, ಕಾಫಿ ಬೆಳೆಗಾರರಾದ ಜಿ.ಜಿ.ಹೇಮಂತ್, ವಿಶೇಷ ಆಹ್ವಾನಿತರಾಗಿ ಸೋಮವಾರಪೇಟೆ ಹಿಂದೂ ಮಲೆಯಾಳಿ ಸಮಾಜದ ಅಧ್ಯಕ್ಷ ಪಿ.ಡಿ.ಪ್ರಕಾಶ್, ಮಡಿಕೇರಿ ಸಮಾಜದ ಅಧ್ಯಕ್ಷ ಕೆ.ಎಸ್.ರಮೇಶ, ಸಿದ್ಧಾಪುರ ಕೈರಳಿ ಸಮಾಜದ ಅಧ್ಯಕ್ಷ ಶ್ರೀನಿವಾಸ್, ಚೆಟ್ಟಳ್ಳಿ ಸಮಾಜದ ಸಧ್ಯಕ್ಷ ಶಶಿಕುಮಾರ್, ಮೂರ್ನಾಡಿನ ಬಾಬು, ಕಾಜೂರು ಸಮಾಜದ ಅಧ್ಯಕ್ಷ ಭಾಸ್ಕರ, ಮರಗೋಡು ಸಮಾಜದ ಅಧ್ಯಕ್ಷ ಬಾಲಕೃಷ್ಣ, ನಾಕೂರು ಸಮಾಜದ ಅಧ್ಯಕ್ಷ ವಿ.ಕೆ.ಗಂಗಾಧರ ಅವರುಗಳು ಆಗಮಿಸಲಿರುವರು.

ದಿನದ ಅಂಗವಾಗಿ ಪೂಕಳಂ ಸ್ಪರ್ಧೆ ಬೆಳಿಗ್ಗೆ 8 ರಿಂದ 10 ಗಂಟೆಯವರೆಗೆ ಸಭಾ ಕಾರ್ಯಕ್ರಮದ ನಂತರ ಓಣಂ ಸಧ್ಯ, ಅಪರಾಹ್ನ 3.ಗಂಟೆಗೆ ಸಾಂಸ್ಕೃತಿಕ ಮೆರವಣಿಗೆ ಮುಖ್ಯ ಬೀದಿಗಳಲ್ಲಿ ನಡೆಯಲಿದೆ. ಸಂಜೆ 6.ಗಂಟೆಗೆ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಲೆಯಾಳಿ ಸಮಾಜದ ಅಧ್ಯಕ್ಷ ಪಿ.ಸಿ.ಮೋಹನ್ ವಹಿಸಲಿದ್ದು ಬಹುಮಾನ ವಿತರಣೆಯನ್ನು ಎಸ್.ಎನ್. ಜಯರಾಮ್ ನೇರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸೋಮವಾರಪೇಟೆ ತಾಲ್ಲೂಕು ನಿರ್ದೇಶಕರಾದ ಆರ್.ರಮೇಶ್ ಪಿಳೈ ಪಾಲ್ಗೊಳ್ಳಲಿದ್ದಾರೆ. ನಂತರ ಸಮಾಜಭಾಂದವರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆರ್.ರಮೇಶ್ ಪಿಳ್ಳೆ, ಉಪಾಧ್ಯಕ್ಷರಾದ ಭಾಸ್ಕರನ್, ಗೌರವಧ್ಯಕ್ಷರಾದ ಶಿವಮಣಿ(ಶಿವರಾಮ್), ಕಾರ್ಯದರ್ಶಿ ರಂಜಿತ, ಕುಮಾರ್, ಕೆ.ಎಂ.ಸತೀಶ್, ರಾಜೇಶ್, ಗಿರೀಶ್, ಇ.ಕೆ.ಪ್ರಕಾಶ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News