ಸುಂಟಿಕೊಪ್ಪ : ಪೊಲೀಸ್ ವರೀಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಹಾಗೂ ಸ್ಪಂದನ್ ಎಸ್ ರೈ ಅವರಿಗೆ ಸನ್ಮಾನ
Update: 2017-09-30 22:15 IST
ಸುಂಟಿಕೊಪ್ಪ,ಸೆ.30: ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಹಾಗೂ ಸ್ಪಂದನ್ ಎಸ್ ರೈ ಅವರನ್ನು ಆಯುಧಪೂಜಾ ಸಮಾರಂಭದ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕೊಡಗು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಇತ್ತೀಚೆಗೆ 2 ಬಾರಿ ಮುಖ್ಯ ಮಂತ್ರಿ ಪದಕ ಹಾಗೂ ರಾಷ್ಟ್ರಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದು ಅವರ ಜನಪರ ಸೇವೆಯನ್ನು ಕಾಳಜಿಯನ್ನು ಗಮನಿಸಿದ ಸುಂಟಿಕೊಪ್ಪ ವಾಹನಚಾಲಕರ ಸಂಘದ ವೇದಿಕೆಯಲ್ಲಿ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಹಾಗೂ ವಿಧಾನ ಪರಿಷತ್ ಸದಸ್ಯೆ ವೀಣಾಅಚ್ಚಯ್ಯ ಹಾಗೂ ಅತಿಥಿಗಳು ಸನ್ಮಾನಿಸಿ ಗೌರವಿಸಿದರು.
ಮುಂಬೈಯಲ್ಲಿ ನಡೆದ ಭಾಷಣ ಸ್ಪರ್ದೆಯಲ್ಲಿ ಭಾರತದ ಸ್ಪರ್ದಿ ಸುಂಟಿಕೊಪ್ಪದ ಸ್ಪಂದನ್ ಎಸ್ ರೈ ಪ್ರಥಮ ಸ್ಥಾನವನ್ನು ಪಡೆದು ಭಾರತಕ್ಕೆ ಕೀರ್ತಿ ತಂದಿದ್ದು ಅವರ ಈ ಸಾಧನೆಯನ್ನು ಪ್ರಶಂಸಿ ಸುಂಟಿಕೊಪ್ಪ ವಾಹನಚಾಲಕರ ಸಂಘದ ಆಯುಧಪೂಜಾ ವೇದಿಕೆಯಲ್ಲಿ ಅತಿಥಿಗಳು ಸನ್ಮಾನಿಸಿದರು.