×
Ad

ಸುಂಟಿಕೊಪ್ಪ : ವಿಜೃಂಭನೆಯಿಂದ ನಡೆದ ಆಯುಧಪೂಜಾ ಕಾರ್ಯಕ್ರಮ

Update: 2017-09-30 22:21 IST

ಸುಂಟಿಕೊಪ್ಪ,ಸೆ.30: ಸುಂಟಿಕೊಪ್ಪದ ಆಯುಧಪೂಜಾ ಆಚರಣೆಯು ಪ್ರತೀವರ್ಷ ವಿಭಿನ್ನ ಶೈಲಿಯಲ್ಲಿ ವಾಹನ ಚಾಲಕರ ಸಂಘದವರು ಆಚರಿಸಿಕೊಂಡು ಬರುತ್ತಿದ್ದು, ಮಿನಿ ದಸಾರ ಖ್ಯಾತಿಯ ಆಯುಧಪೂಜೆಯು ಅಂಗಡಿ, ಕಛೇರಿ, ವರ್ಕ್‍ಶಾಫ್, ವಾಹನಗಳ ಅಲಂಕೃತ ಮಂಟಪದಲ್ಲಿ ದೇವಾನು ದೇವತೆಗಳ ಕಲಾಕೃತಿ ಚಲನವಲನಗಳು ನೇರೆದಿದ್ದ ಸಾವಿರಾರು ಜನರನ್ನು ಸೂಜಿಗಲ್ಲಿನಂತೆ ಸೆಳೆಯಿತು. 

ವಾಹನ ಚಾಲಕರ ವೇದಿಕೆಯಲ್ಲಿ ನಡೆದ ಆಯುಧಪೂಜಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನಪರೀಷತ್ ಸದಸ್ಯೆ ವೀಣಾಅಚ್ಚಯ್ಯ ಮಾತನಾಡಿ ಬಹಳ ವರ್ಷಗಳಿಂದ ಸುಂಟಿಕೊಪ್ಪ ವಾಹನಚಾಲಕರು ಜಾತ್ಯಾತೀತ ನಿಲುವಿನಲ್ಲಿ ಎಲ್ಲಾ ವರ್ಗದವರು ಸೇರಿಕೊಂಡು ಆಯುಧಪೂಜಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ ಪಕ್ಷಬೇಧ ಮರೆತು ಚಾಮುಂಡೇಶ್ವರಿಯ ಆರ್ಶಿವಾದದಿಂದ ಜನಪ್ರತಿನಿಧಿಗಳು ನಾಡಿನ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ ಸುಂಟಿಕೊಪ್ಪ ವಿಭಾಗದ ಬಹಳಷ್ಟು ಬೇಡಿಕೆ ಈಡೇರಿಸಿದ್ದೇನೆ. ಕೂಲಿ ಕಾರ್ಮಿಕರಿಗೆ ನಿವೇಶನ ಗುರುತಿಸಿ ಸೂರು ಕಲ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಲಲಿದ್ದೇನೆ. ಗ್ರಾಮ ಪಂಚಾಯಿತಿಯ 11 ಬಿ ಸಮಸ್ಯೆ ಬಗ್ಗೆ ಸರ್ಕಾರದ ವ್ಯವಹರಿಸಿ ನ್ಯಾಯ ದೊರಕಿಸುತ್ತೇನೆ. ವಾಹನ ಚಾಲಕರು ಮದ್ಯ ಸೇವಿಸಿ ವಾಹನ ಚಾಲಿಸಬಾರದು ರಾಷ್ಟ್ರೀಯ ಹೆದ್ದಾರಿ ಆಗಲಿದ್ದು ಸುಂಟಿಕೊಪ್ಪ ಪಟ್ಟಣದಲ್ಲಿ ಬೈಪಾಸ್ ರಸ್ತೆ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಇದು ಕಾರ್ಯರೂಪಕ್ಕೆ ಬರಲಿದೆ ಸುಂಟಿಕೊಪ್ಪ ವಾಹನ ಚಾಲಕರ ಸಂಘದವರು ಜಾತಿ ಮತ ಧರ್ಮ ಭೇದವಿಲ್ಲದೆ ಎಲ್ಲಾರೂ ಸೇರಿ ಆಯುಧಪೂಜೆ ಆಚರಣೆ ನಡೆಸಿಕೊಂಡು ಬರುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದು ಅವರು ಹೇಳಿದರು.

 ಜಿ.ಪಂ.ಸದಸ್ಯೆ ಕೆ.ಪಿ.ಚಂದ್ರಕಲಾ ಮಾತನಾಡಿ ಆಯುಧಪುಝೆಯನ್ನು ಅತ್ಯಂತ ಶ್ರದ್ಧೆಯಿಂದ ವಾಹನ ಚಾಲಕರು ಹಲವಾರು ವರ್ಷದಿಂದ ಆಚರಿಸಿಕೊಂಡು ಬರುತ್ತಿರುವುದು ಶ್ಲಾಘನೀಯವಾದುದು ಸುಂಟಿಕೊಪ್ಪ ವಿಭಾಗಕ್ಕೆ ಮುಖ್ಯ ಮಂತ್ರಿಗಳ ವಿಶೇಷ ಪ್ಯಾಕೇಜ್‍ನಿಂದ 60 ಲಕ್ಷ ರೂ ಅಭಿವೃದ್ಧಿ ಕಾರ್ಯಕ್ಕೆ ಬಿಡುಗಡೆಯಾಗಿದೆ. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ 11 ಬಿ ನಿವೇಶನ ಸಮಸ್ಯೆಯನ್ನು ಸರಕಾರದ ಮಟ್ಟದಲ್ಲಿ ವಿಧಾನಪರೀಷತ್ ಸದಸ್ಯರು ಶಾಸಕರು ಅವರೊಂದಿಗೆ ಸೇರಿ ಚರ್ಚಿಸಿ ಕಾನೂನು ತಿದ್ದುಪಡಿ ತರಲಾಗುವುದೆಂದರು. 

  ಜಿ.ಪಂ. ಸದಸ್ಯ ಪಿ.ಎಂ.ಲತೀಫ್ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಆಯುಧಪೂಜಾ ಸಮಾರಂಭವು ದಿನದಿಂದ ದಿನಕ್ಕೆ  ಕಳೆಗುಂದುತ್ತಿದ್ದು ಅವರನ್ನು ಪ್ರೋತ್ಸಾಹಿಸುವ ದಿಸೆಯಲ್ಲಿ ಶೋಭಾಯಾತ್ರೆಯ ಮಂಟಪಕ್ಕೆ ವೈಯಕ್ತಿಕ 7 ಸಾವಿರ ರೂ ವಾಹನ ಚಾಲಕರ ಸಂಘದ ಮೂಲಕ ಘೋಷಣೆ ಮಾಡಿ ಧನ ಸಹಾಯ ನೀಡಿದರು.

  ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಸನ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ ಅಧ್ಯಕ್ಷರಾದ ಎ.ಲೋಕೇಶ್‍ಕುಮಾರ್ ಮಾತನಾಡಿ ಸುಂಟಿಕೊಪ್ಪ ಮುಖ್ಯ ಮಂತ್ರಿಗಳಾಗಿದ್ದ ದಿ.ಗುಂಡೂರಾಯರ ಕಾಲಂದಿಲೂ ಆಯುಧಪೂಜೆ ಯಶಸ್ವಿಯಾಗಿ ನಡೆಯುತ್ತಾ ಬರುತ್ತಿದ್ದು ಊರಿನ ಅಭಿವೃದ್ಧಿಗೂ ಸಂಘಟನೆ ಕೈ ಜೋಡಿಸುತ್ತಿದೆ ಎಂದರು. 
 
 ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ವಿಪಿ.ಶಶಿಧರ್, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಾಲಾವತಿ ಸುಧೀಶ್, ಎಚ್.ಎಂ.ಸೋಮಪ್ಪ ಅವರು ಮಾತನಾಡಿದರು. 

ಕೊಡಗು ಜಿಲ್ಲಾ ವಾಹನ ಚಾಲಕರ ಸಂಘದ ಅಧ್ಯಕ್ಷರಾದ ಎಂ.ಎ. ಉಸ್ಮಾನ್ ಊರಿನ ವಿವಿಧ ಬೇಡಿಕೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. 
ಸಮಾರಂಭದ ವೇದಿಕೆಯಲ್ಲಿ ವಾಹನ ಚಾಲಕರ ಸಂಘದ ಅಧ್ಯಕ್ಷ ಬಿ.ಎಂ.ಪೂವಪ್ಪ, ವಿಎಸ್‍ಎಸ್‍ಎನ್ ಅಧ್ಯಕ್ಷರಾದ ಎನ್.ಸಿ.ಪೊನ್ನಪ್ಪ(ಕ್ಲೈವಾ),ಡಿವೈಎಸ್.ಪಿ. ಸಂಪತ್ ಕುಮಾರ್,ಗುಪ್ತಚಾರ ಇಲಾಖೆ ಡಿವೈಎಸ್‍ಪಿ ದಿನೇಶ್, ಪಂಚಾಯಿತಿ ಸದಸ್ಯರುಗಳಾದ ಜಿ.ಜಿ.ಹೇಮಂತ್, ಎ.ಶ್ರೀಧರ್‍ಕುಮಾರ್,ಕೆ.ಇ.ಕರೀಂ, ರತ್ನಾ ಜಯನ್, ನಾಗರತ್ನ ಸುರೇಶ್, ಶಿವಮ್ಮ ಮಹೇಶ್, ದಾನಿಗಳಾದ ಪಟ್ಟೆಮನೆ ಉದಯಕುಮಾರ್, ಬೈಮನ ತಲಾಮಧು, ಗುತ್ತಿಗೆದಾರ ಮನಿಯಪ್ಪ,ವ್ಯಾಪಾರಿ ಮೊಯ್ದು, ಕನ್ನಡಾಭೀಮಾನಿ ತಲೆಹೊರೆ ಕಾರ್ಮಿಕ ಸಂಘದ ಅಧ್ಯಕ್ಷ ಎಂ.ಎಸ್.ರವಿ, ಮಾಜಿ ಪಂಚಾಯಿತಿ ಅಧ್ಯಕ್ಷ ಸದಾಶಿವ ರೈ, ಜೆಸಿಐ ಸಂಸ್ಥೆಯ ಮಾಜಿ ಪ್ರೇಮಲತಾ ಸದಾಶಿವ ರೈ, ವಾಹನ ಚಾಲಕರ ಸಂಘದ ಮಾಜಿ ಅಧ್ಯಕ್ಷರಾದ ಅಚ್ಚುಪ್ಪ(ಹಂಸ), ಜಬ್ಬಾರ್ ಉಪಸ್ಥಿತರಿದ್ದರು.

ಕುಶಾಲನಗರದ ವಾಯ್ಸ್ ಆಫ್ ಕೂರ್ಗ್ ಬ್ಲೂಸ್ಟಾರ್ ತಂಡದವರಿಂದ ಸಂಗೀತ ರಸಮಂಜರಿ ಹಾಗೂ ಮೈಸೂರಿನ ಜಗ್ಗು ಜಾದುಗಾರ ಅವರಿಂದ ಜಾದು ಪ್ರದರ್ಶನವು ನೆರೆದಿದ್ದ ಸಹಸ್ರಾರು ಮಂದಿಯ ಮನಸೂರೆಗೊಳಿಸಿದರು. 

ಸಮಾರಂಭದ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಮುನ್ನಚ್ಚರಿಕ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್‍ನ್ನು ಕುಶಾಲನಗರ ವೃತ್ತ ನಿರೀಕ್ಷಕರಾದ ಕ್ಯಾತೇಗೌಡ ಹಾಗೂ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಜಯರಾಂ ಹಾಗೂ ಸಿಬ್ಬಂದಿಗಳು ವಹಿಸಿದ್ದರು. 
ಮೊದಲಿಗೆ ಶ್ವೇತಾ ಪ್ರಾರ್ಥಿಸಿ, ಸಂವೇದಿತ ಸ್ವಾಗತ ನೃತ್ಯ ನೇರವೇರಿಸಿ, ಎಂ.ಎ.ಉಸ್ಮಾನ್ ಸ್ವಾಗತಿಸಿ, ಡಿ.ಎಂ. ಮಂಜುನಾಥ್ ನಿರೂಪಿಸಿ ವಂದಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News