ಬಸ್‍ಗಳ ಮುಖಾಮುಖಿ ಢಿಕ್ಕಿ : 20 ಪ್ರಯಾಣಿಕರಿಗೆ ಗಾಯ
Update: 2017-10-01 18:15 IST
ಶಿವಮೊಗ್ಗ, ಅ.1: ಎರಡು ಖಾಸಗಿ ಬಸ್‍ಗಳ ನಡುವೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಎರಡೂ ಬಸ್‍ಗಳಲ್ಲಿದ್ದ 20 ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಹನಿಯಾ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಕುಂದಾಪುರದಿಂದ ಶಿವಮೊಗ್ಗದ ಕಡೆಗೆ ಸಾಗುತ್ತಿದ್ದ ಹನುಮಾನ್ ಕಂಪೆನಿಯ ಬಸ್ ಹಾಗೂ ಹೊಸನಗರ ಕಡೆಯಿಂದ ಕುಂದಾಪುರಕ್ಕೆ ತೆರಳುತ್ತಿದ್ದ ದುರ್ಗಾಂಬ ಬಸ್‍ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಎರಡು ಬಸ್‍ಗಳ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ.
ಗಾಯಗೊಂಡ ಪ್ರಯಾಣಿಕರನ್ನು ಮಣಿಪಾಲ್ ಆಸ್ಪತ್ರೆಗೆ ಹಾಗೂ ಉಳಿದ ಗಾಯಾಳುಗಳನ್ನು ಹೊಸನಗರ ಪಟ್ಟಣದ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.