ರುಂಡವಿಲ್ಲದ ಅಪರಿಚಿತ ವ್ಯಕ್ತಿಯ ಶವ ಪತ್ತೆ
Update: 2017-10-01 18:24 IST
ಶಿವಮೊಗ್ಗ, ಅ. 1: ರುಂಡವಿಲ್ಲದ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿರುವ ಘಟನೆ ತಾಲೂಕಿನ ಕಾಕನಹಸೂಡಿ ಗ್ರಾಮದಲ್ಲಿ ನಡೆದಿದೆ.
ಕಾಕನಹಸೂಡಿ ಮತ್ತು ಲಿಂಗಾಪುರ ನಡುವಿನ ನರಸಿಂಹರಾಜಪುರ ರಸ್ತೆಯಲ್ಲಿನ ಮೋರಿಯ ಪೈಪ್‍ನೊಳಗೆ ಈ ಶವ ಪತ್ತೆಯಾಗಿದೆ. ತಲೆಯನ್ನು ಕಡಿದು ಹಾಕಲಾಗಿದೆ. ಹೆಸರು, ವಿಳಾಸ ಸೇರಿದಂತೆ ಇತರೆ ಯಾವುದೇ ವಿವರಗಳು ಲಭ್ಯವಾಗಿಲ್ಲ. ಮೃತರಿಗೆ ಸುಮಾರು 30 ರಿಂದ 40 ವರ್ಷ ವಯೋಮಾನವಿದೆ. ಮೂರ್ನಾಲ್ಕು ದಿನಗಳ ಹಿಂದೆ ವ್ಯಕ್ತಿಯ ಹತ್ಯೆ ನಡೆಸಿ, ದೇಹವನ್ನು ತಂದಿಟ್ಟಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.