×
Ad

ಲಿಂಗಾಯತ ಸ್ವತಂತ್ರ ಧರ್ಮ: ಮುಖ್ಯಮಂತ್ರಿ ಭರವಸೆ

Update: 2017-10-01 18:27 IST

ಚಿತ್ರದುರ್ಗ, ಅ. 1: ಲಿಂಗಾಯುತ ಪ್ರತ್ಯೇಕ ಧರ್ಮದ ಬಗ್ಗೆ ನನಗೆ ಮಾತೆ ಮಹಾದೇವಿಯವರು ಪತ್ರ ಬರೆದಿದ್ದಾರೆ. ಲಿಂಗಾಯುತ ಧರ್ಮ ಸ್ವತಂತ್ರ ಧರ್ಮವಾಗಬೇಕು. ನನಗೆ ಲಿಂಗಾಯುತ ಧರ್ಮದ ಬಗ್ಗೆ ತಕರಾರು ಇಲ್ಲ. ನೀವೆಲ್ಲ ಒಂದಾಗಿ ಬಂದರೆ ಅದರ ಜವಾಬ್ದಾರಿಯನ್ನು ನಾನು ನಿಭಾಯಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ರವಿವಾರ ನಗರದಲ್ಲಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ‘ವಚನ ಮಾರ್ಗ’ ಬೃಹತ್ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು,ಬಸವಾದಿ ಶರಣರು ತಾರತಮ್ಯ ನಿವಾರಿಸಿ, ಮಾನವೀಯತೆ ಮೌಲ್ಯದ ಕನಸು ಕಂಡಿದ್ದರು. ಅವರಲ್ಲಿ ಜಾತಿ ವ್ಯವಸ್ಥೆ ಇರಿಲಿಲ್ಲ. ಸಾಮಾಜಿಕ ವ್ಯವಸ್ಥೆಯ ಕನಸು ಕಂಡಿದ್ದರು. ಆದರೆ, ಸಾಮಾಜಿಕ ವ್ಯವಸ್ಥೆ ಆಳವಾಗಿ ಬಿಟ್ಟಿರುವುದರಿಂದ ಅವರ ಕನಸು ನನಸಾಗಿಲ್ಲ. ಅದು ಇಂದಲ್ಲ ನಾಳೆ ಆಗಲೇ ಬೇಕು. ಈ ಬಗ್ಗೆ ಜನರು ವಿಚಾರ ಶೀಲತೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು

12ನೆ ಶತಮಾನದಲ್ಲಿ ಅನುಭವ ಮಂಟಪ ಮಾಡಿ ಅಲ್ಲಮಪ್ರಭು ಅಧ್ಯಕ್ಷರಾದರು. ಅವರು ದೊಂಬರ ಜಾತಿಯವರಾಗಿದ್ದು, ಅಧ್ಯಕ್ಷರಾಗಿದ್ದರು. ನಮ್ಮದು ಶ್ರೇಣಿಕೃತ ವ್ಯವಸ್ಥೆ, ಅದು ಹೋಗಿ ಸಮಾನತೆ ಬರಬೇಕು ಎಂದು ಬಸವಾದಿ ಶರಣರು ಕನಸು ಕಂಡಿದ್ದರು ಸಮಾನತೆ ಬೀಜ ಬಿತ್ತಿದ್ದರು.

‘ಇವನ್ಯಾರವ ಇವನ್ಯಾರವ ಎಂದಿನಿಸದಿರಯ್ಯ ಇವನಮ್ಮವ ಇವನಮ್ಮವ ಎಂದೆನಿಸದಿರಯ್ಯ’ ಎಂದು ಹೇಳಿ ಜಾತಿ ವ್ಯವಸ್ಥೆ ಬೇರನ್ನು ಸಡಿಲ ಮಾಡಲು ಬಸವಾದಿ ಶರಣರು ಮತ್ತು ಕನಕದಾಸರು ವಿಚಾರಗಳು ಮುಖ್ಯ ಎಂದು ಸಿದ್ದರಾಮಯ್ಯ ಹೇಳಿದರು.

ಮರುಘ ಮಠದ ಡಾ.ಶಿವಮೂರ್ತಿ ಮುರುಘ ಶರಣರು, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ,ಸಮಾಜ ಕಲ್ಯಾಣ ಎಚ್. ಆಂಜನೇಯ, ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ಸಂಸದ ಬಿ.ಎನ್.ಚಂದ್ರಪ್ಪ, ಶಾಸಕರಾದ ಬಿ.ಜಿ.ಗೋಂದಪ್ಪ, ಟಿ.ರಘುಮೂರ್ತಿ, ಜಯಮ್ಮ ಬಾಲರಾಜ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News