×
Ad

ಸಿದ್ದರಾಮಯ್ಯ ಮೌಢ್ಯ ವಿರೋಧಿ ಕಾನೂನು ತರಲು ಶ್ರಮಿಸುತ್ತಿದ್ದಾರೆ: ಡಾ.ಶಿವಮೂರ್ತಿ ಮುರುಘಾ ಶರಣರು

Update: 2017-10-01 18:59 IST

ಚಿತ್ರದುರ್ಗ, ಅ.1: ಸಿದ್ದರಾಮಯ್ಯನವರ ರಾಜ್ಯ ಸರ್ಕಾರ ಹಲವು ಸಿದ್ಧಾಂತಗಳನ್ನು ಆಧರಿಸಿದ್ದು, ಬುದ್ಧ, ಬಸವ ಹಾಗೂ ಪೈಂಗಬರ್ ಮುಂತಾದವರ ಸಿದ್ಧಾಂತಗಳನ್ನು ಅನುಷ್ಠಾನ ತರುವಲ್ಲಿ ಶ್ರಮಿಸುತ್ತಿದೆ ಎಂದು  ಡಾ.ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದಲ್ಲಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ‘ವಚನ ಮಾರ್ಗ’ ಬೃಹತ್ ಗ್ರಂಥ ಲೋಕಾರ್ಪಣೆ  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ‘ವಚನ ಮಾರ್ಗ’ ಎಂಬ ಬೃಹತ್ ಗ್ರಂಥ ಮಾಲೆ ಬಿಡುಗಡೆ ಮಾಡುತ್ತಿರುವುದು ನನಗೆ ಅತೀವ ಸಂತಸ ತಂದಿದೆ.  ಸಿದ್ದರಾಮಯ್ಯನವರು ಬಸವಣ್ಣನವರ ಸಿದ್ಧಾಂತವನ್ನು ಅಂತರಂಗದಲ್ಲಿ ಇಟ್ಟು ಬಹಿರಂಗ ಪಡಿಸುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ನನ್ನ ಸಿದ್ಧಾಂತ ಒಂದೆ ಇದೆ. ಬಸವಾದಿ ಶರಣರು ಹುಟ್ಟಿದ ನಾಡಲ್ಲಿ ಮೌಢ್ಯ ವಿರೋಧಿ ಕಾನೂನು ತರಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಲಿಂಗಾಯುತ ಧರ್ಮ ಸ್ಥಾಪನೆಗೆ ಸೂಕ್ತವಾದ ಪ್ರೋತ್ಸಾಹ ನೀಡಬೇಕು. ತುಂಗಾ ತಿರುವು ಬರಲು ಹಣಕಾಸು ಹೆಚ್ಚಿನದಾಗಿ ಬಿಡುಗಡೆ ಮಾಡಿ ಕೆರೆ ಕಟ್ಟೆಗಳನ್ನು ತುಂಬಿಸುವ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ವಚನ ಮಾರ್ಗ ಇಷ್ಟವಾದ ಕೃತಿ ಈ ಕೃತಿ ಶ್ರೀಗಳ ಪರಿಕಲ್ಪನೆಯಿಂದ ಮೂಡಿ ಬಂದಿದೆ. ಜಾತಿಯ ಧರ್ಮದ ವ್ಯವಸ್ಥೆಗೆ ವಿರುದ್ಧವಾಗಿ ಹುಟ್ಟಿಕೊಂಡ ಧರ್ಮವನ್ನು ಶರಣರು ಕಟ್ಟಿದರು. 12ನೆ ಶತಮಾನದಲ್ಲಿ ಚಲನರಹಿತವಾಗಿದ ಸಮಾಜಕ್ಕೆ ಬಸವಣ್ಣನವರು ಚಲನೆಯನ್ನು ನೀಡುವಂತಹ ಕೆಲಸವನ್ನು ಮಾಡಿದರು. ಬಸವ ಪ್ರಜ್ಞೆಯಿಂದ ಮಾತ್ರ ಮುಷ್ಯತ್ವ ಪಡೆಯಲು ಸಾಧ್ಯವೆಂಬು ಈ ವಚನ ಮಾರ್ಗದ ತಿರುಳಾಗಿದೆ ಎಂದರು. 

ಈ ವೇಳೆ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ವಚನ ಮಾರ್ಗ ಗ್ರಂಥವನ್ನು ಲೋಕಾರ್ಪಣೆಗೊಳಿಸಿದರು. ಅಲ್ಲದೆ, ಸಿದ್ದರಾಮಯ್ಯನವರನ್ನು ಸನ್ಮಾನಿಸಲಾಯಿತು. 

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ, ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ಕಾರ್ಯಕ್ರಮದಲ್ಲಿ ಸಂಸದ ಶ್ರೀ ಬಿ.ಎನ್.ಚಂದ್ರಪ್ಪ, ಜಿಲ್ಲೆಯ ಶಾಸಕರಾದ ಬಿ.ಜಿ.ಗೋವಿಂದಪ್ಪ, ಟಿ.ರಘುಮೂರ್ತಿ, ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಜಯಮ್ಮ ಬಾಲರಾಜ್, ನಗರಸಭೆ ಅಧ್ಯಕ್ಷ ಶ್ರೀ ಮಂಜುನಾಥ ಗೊಪ್ಪೆ, ಪಾತ್ಯಾರಾಜನ್, ಮೇಹಬೂಬ್ ಪಾಷ, ಹನುಲಿ ಕೃಷ್ಣಪ್ಪ, ಸಂಜೀವ ಕುಮಾರ, ರಾಜೇಶ್, ಜಿಲ್ಲಾಧಿಕಾರಿ ವಿಜಯ ಜೋತ್ಸ್ನ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News