ವಿದ್ಯುತ್ ತಂತಿ ತುಳಿದು ಗೃಹಿಣಿ ಮೃತ್ಯು
Update: 2017-10-01 19:25 IST
ಮಂಡ್ಯ, ಅ.1: ಹೊಲದಲ್ಲಿ ತುಂಡಾಗಿ ಬಿದ್ದಿದ ವಿದ್ಯುತ್ ತಂತಿ ತುಳಿದು ಗೃಹಣಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮಳವಳ್ಳಿ ತಾಲೂಕಿನ ನಂದಿಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸುರೇಶ್ ಪತ್ನಿ ಪ್ರೇಮ(32) ಮೃತಪಟ್ಟವರೆಂದು ಗುರುತಿಸಲಾಗಿದೆ.
ಪ್ರೇಮ ಅವರು ಹೊಲದಲ್ಲಿದ್ದ ಪಂಪ್‍ಸೆಟ್‍ಗೆ ವಿಜಯದಶಮಿ ಪೂಜೆ ಸಲ್ಲಿಸಲು ತೆರಳಿದ್ದಾಗ ಕಡಿದು ಬಿದ್ದಿದ್ದ ತಂತಿ ಗಮನಿಸದೆ ತುಳಿದಾಗ ಈ ಘಟನೆ ಸಂಭವಿಸಿದೆ ಎಂದು ಹಲಗೂರು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಸೆಸ್ಕ್ ಅಧಿಕಾರಿಗಳಾದ ಪರಮೇಶ್ವರಪ್ಪ, ಗುರು ಸೂರ್ಯಕುಮಾರ್, ಪ್ರೇಮಳ ಕುಟುಂಬಕ್ಕೆ ಒಂದು ಲಕ್ಷ ಪರಿಹಾರದ ಜತೆಗೆ, ಇಲಾಖೆಯಿಂದ ದೊರೆಯುವ ಹೆಚ್ಚಿನ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.