×
Ad

ವಿದ್ಯಾರ್ಥಿನಿ ಆತ್ಮಹತ್ಯೆ

Update: 2017-10-01 19:26 IST

ಮಂಡ್ಯ, ಅ.1: ಸಹಪಾಠಿಗೆ ಪರೀಕ್ಷೆಯಲ್ಲಿ ಸಹಾಯ ಮಾಡಿದ ಕಾರಣಕ್ಕೆ ಶಿಕ್ಷಕರು ಎಚ್ಚರಿಕೆ ನೀಡಿದ್ದರಿಂದ ಮನನೊಂದ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಯತ್ತಗದಹಳ್ಳಿ ಬಡಾವಣೆಯಲ್ಲಿ ನಡೆದಿದೆ.

ದೇವಮ್ಮ ಶಂಕರೇಗೌಡ ಪುತ್ರಿ ವೈ.ಎಸ್.ವಂದನಾ(17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.

ಈಕೆ ಮಿಮ್ಸ್‍ನಲ್ಲಿ ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಢುತ್ತಿದ್ದು, ಗುರುವಾರ ಪರೀಕ್ಷೆ ಬರೆದಿದ್ದಳು.
ಪರೀಕ್ಷೆ ಸಮಯದಲ್ಲಿ ವಂದನಾ ತನ್ನ ಸಹಪಾಠಿಗೆ ಸಹಾಯ ಮಾಡುತ್ತಿದ್ದಾಗ ಶಿಕ್ಷಕರ ಕೈಗೆ ಸಿಕ್ಕಿಬಿದ್ದು ಎಚ್ಚರಿಕೆಗೊಳಗಾಗಿದ್ದಳು. ಮನೆಯವರೂ ಆ ರೀತಿ ಮಾಡಬಾರದು ಎಂದು ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News