×
Ad

ಕೌಟುಂಬಿಕ ಕಲಹ: ಗೃಹಿಣಿ ಆತ್ಮಹತ್ಯೆ

Update: 2017-10-01 21:52 IST

ಮಂಡ್ಯ, ಅ.1: ಕೌಟುಂಬಿಕ ಕಲಹದಿಂದ ಬೇಸತ್ತ ಗೃಹಿಣಿ ನೇಣು  ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಳವಳ್ಳಿ ತಾಲೂಕು ಕಿರುಗಾವಲು ಪೊಲೀಸ್ ಠಾಣೆ ವ್ಯಾಪ್ತಿಯ ವಡಕೆಪುರ ಗ್ರಾಮದಲ್ಲಿ ನಡೆದಿದೆ.

ಆಸಿಫ್‍ ಪಾಷಾ ಎಂಬಾತನ ಪತ್ನಿ ತಬಸಾ ಭಾನು(30) ಆತ್ಮಹತ್ಯೆ ಮಾಡಿಕೊಂಢವರು. ಈಕೆ ಶನಿವಾರ ತಡರಾತ್ರಿ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಚನ್ನಪಟ್ಟಣದ ತಾಸಾಲುಮ ಎಂಬುವರ ಮಗಳಾದ ಈಕೆಯನ್ನು 8 ವರ್ಷದ ಹಿಂದೆ ವಡಕೆಪುರದ ಆಸಿಫ್‍ಪಾಷಾ ಎಂಬಾತನಿಗೆ ಕೊಟ್ಟು ವಿವಾಹ ಮಾಡಿಕೊಡಲಾಗಿದ್ದು ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಕೆಲದಿನಗಳಿಂದ ಗಂಡಹೆಂಡಿರ ನಡುವೆ ಕೌಟುಂಬಿಕ ವಿಚಾರವಾಗಿ ಕಲಹವಿತ್ತು ಎನ್ನಲಾಗಿದ್ದು, ಮೃತಳ ತಂದೆ ತಾಸಾಲುಮ ಕಿರುಗಾವಲು ಪೊಲೀಸರಿಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News