ಓ ಮೆಣಸೇ… !

Update: 2017-10-02 04:50 GMT

ಕೆ.ಎಸ್.ಈಶ್ವರಪ್ಪರಿಗೆ ತಲೆಯಿಲ್ಲ ಎನ್ನಲು ಸಿದ್ದರಾಮಯ್ಯ ಅವರೇನು ವೈದ್ಯರೇ?

- ಜಗದೀಶ್ ಶೆಟ್ಟರ್, ವಿಧಾನಸಭೆ ವಿಪಕ್ಷ ನಾಯಕ

 ✍️  ಹಾಗಾದರೆ ವೈದ್ಯಕೀಯ ಪರೀಕ್ಷೆ ನಡೆಯಲಿ ಬಿಡಿ.                                                    

---------------------

 ► ಬಿಜೆಪಿಯ ಮಿಷನ್ 150 ಕನಸನ್ನು ಮೈನಸ್ 150ಕ್ಕೆ ತಂದು ನಿಲ್ಲಿಸುವುದು ಕಾಂಗ್ರೆಸ್‌ನ ಗುರಿ

  -ವೀರಪ್ಪ ಮೊಯ್ಲಿ, ಸಂಸದ

 ✍️  ಕಾಂಗ್ರೆಸ್‌ನ್ನು ಒಂದು ಕಾಲದಲ್ಲಿ ಮೈನಸ್ 150ಕ್ಕೆ ತಂದು ನಿಲ್ಲಿಸಿದ ಹೆಗ್ಗಳಿಕೆ ಹೇಗೂ ನಿಮಗಿದೆ.

---------------------

  ► ಎಲ್ಲದಕ್ಕೂ ಒಂದು ಶುಭ ಘಳಿಗೆ ಇದೆ, ಅದಕ್ಕಾಗಿ ಕಾಯುತ್ತಿದ್ದೇನೆ - ಡಿ.ಕೆ.ಶಿವಕುಮಾರ್, ಸಚಿವ

 ✍️  ಜನರ ಪಾಲಿಗೆ ಅದನ್ನು ಯಾವ ಘಳಿಗೆಯೆಂದು ಕರೆಯಬೇಕು?

---------------------

►  ಪಕ್ಷದ ಹಿರಿಯರು ಹಾಕಿದ ಬುನಾದಿಯಲ್ಲಿ ಕಾಂಗ್ರೆಸ್ ಸಾಗಬೇಕು - ಆಸ್ಕರ್ ಫೆರ್ನಾಂಡಿಸ್, ಕಾಂಗ್ರೆಸ್ ಪ್ರ.ಕಾರ್ಯದರ್ಶಿ

  ✍️ ಅಂದರೆ ಸದ್ಯಕ್ಕಂತೂ ಹಿರಿಯರು ಯುವಕರಿಗೆ ದಾರಿ ಮಾಡಿಕೊಡುವ ಸಾಧ್ಯತೆಗಳು ಕಾಣುತ್ತಿಲ್ಲ.

---------------------

►  ರಾಜಕಾರಣಿಗಳು ನಾಯಕರಾಗಬೇಕೇ ಹೊರತು ದಾಳವಾಗಬಾರದು - ಬಿ.ಕೆ.ಹರಿಪ್ರಸಾದ್, ರಾಜ್ಯಸಭೆ ಸದಸ್ಯ

 ✍️  ದಾಳ ಹಾಕುವವರಾಗಬೇಕು, ಅಲ್ಲವೇ?

---------------------

►  ಕವಿಗಳಿಗೆ ಹೊರಗಡೆ ಗೌರವ ಇರುತ್ತದೆ, ಮನೆಯಲ್ಲಿ ಅವರು ವೇಸ್ಟ್‌ಬಾಡಿ - ಸಿದ್ದಲಿಂಗಯ್ಯ, ದಲಿತ ಕವಿ

 ✍️ ಇತ್ತೀಚೆಗೆ ಕವಿಗಳು ಹೊರಗಡೆಯೂ ಗೌರವ ಕಳೆದುಕೊಳ್ಳುತ್ತಿದ್ದಾರೆ.

---------------------

 ►  ಖಾದಿ ಕೇವಲ ಬಟ್ಟೆಯಲ್ಲ, ಅದೊಂದು ಆಂದೋಲನ 

- ನರೇಂದ್ರ ಮೋದಿ, ಪ್ರಧಾನಿ

✍️  ಖಾದಿಗೂ ನಿಮ್ಮ ಅಚ್ಛೇದಿನ್ ಕಾದಿದೆಯೇ?

---------------------

►  ಸಿದ್ದರಾಮಯ್ಯ ಏನು ಮಾತನಾಡುತ್ತಾರೆ ಎಂದು ಅವರಿಗೇ ಗೊತ್ತಿಲ್ಲ - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

✍️  ಏನು ಮಾಡುತ್ತಿದ್ದಾರೆ ಎನ್ನುವುದು ಜನರಿಗೆ ಚೆನ್ನಾಗಿ ಗೊತ್ತಿದೆ.

---------------------

►  ಮನೆ ಮನೆಗೆ ಕಳ್ಳರು (ಕಾಂಗ್ರೆಸ್) ಬರುತ್ತಿದ್ದಾರೆ ನಾಗರಿಕರು ಇದನ್ನು ಗಮನಿಸಬೇಕು

- ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ

►  ಅಲ್ಲಿ ಕದಿಯುವುದಕ್ಕಾದರೂ ಏನು ಉಳಿದಿದೆ. ಎಲ್ಲವನ್ನೂ ಕೇಂದ್ರದ ಕಳ್ಳರು ದೋಚಿ ಆಗಿದೆ.

---------------------

►  ಕಾಂಗ್ರೆಸ್‌ನವರಿಂದಲೇ ಪಕ್ಷ ಸೋಲಬಾರದು - ಶಕುಂತಲಾ ಶೆಟ್ಟಿ, ಶಾಸಕಿ

 ✍️  ಬಿಜೆಪಿಯವರಿಂದಲೇ ಸೋಲಿಸಬೇಕು ಎಂದು ಹಟವೇ?

---------------------

ರಜನಿಕಾಂತ್ ಬಿಜೆಪಿಗೆ ಹೇಳಿ ಮಾಡಿಸಿದ ಸಂಗಾತಿ - ಕಮಲ್‌ಹಾಸನ್, ನಟ

 ✍️  ನರೇಂದ್ರ ಮೋದಿಯವರು ರಜನಿಕಾಂತ್ ಸಿನಿಮಾ ನೋಡಿಯೇ ರಾಜಕೀಯ ಕಲಿತಿರುವುದಂತೆ.

---------------------

►  ಚೂರಿ ಹಾಕುವ ಬುದ್ಧಿ ಇದ್ದಿದ್ದರೆ ಯಾವಾಗಲೋ ಮುಖ್ಯಮಂತ್ರಿಯಾಗುತ್ತಿದ್ದೆ - ಕಾಗೋಡು ತಿಮ್ಮಪ್ಪ, ಸಚಿವ

 ✍️  ಯಾವುದನ್ನು ಹಾಕಿ ಸಚಿವರಾದಿರಿ ಎನ್ನುವುದನ್ನಾದರೂ ಹೇಳಿ.

---------------------

►   ಹೊಸ ಪಕ್ಷ ರಚಿಸುವ ಯಾವುದೇ ಯೋಚನೆ ನನ್ನ ಮುಂದಿಲ್ಲ

- ಮುಲಾಯಂ ಸಿಂಗ್ ಯಾದವ್, ಎಸ್ಪಿ ಅಧ್ಯಕ್ಷ

 ✍️  ಹಳೆ ಪಕ್ಷದ ಗತಿಯೇನಾಯಿತು ಹೇಳಿ.

---------------------

►   ಭ್ರಷ್ಟರನ್ನು ಸುಮ್ಮನೆ ಬಿಡೋಲ್ಲ, ಯಾಕೆಂದರೆ ನನಗಾರೂ ಸಂಬಂಧಿಕರಿಲ್ಲ - ನರೇಂದ್ರ ಮೋದಿ, ಪ್ರಧಾನಿ

✍️  ಸಂಬಂಧಿಕರಿದ್ದರೆ ಸುಮ್ಮನೆ ಬಿಡುತ್ತಿದ್ದಿರಿ ಎಂದಾಯಿತು.

---------------------

 ►  ಕಂಡಿದ್ದನ್ನು ಕಂಡಹಾಗೆ ಹೇಳುವವನೇ ಸಾಹಿತಿ - ಚಂದ್ರಶೇಖರ ಪಾಟೀಲ, ಸಾಹಿತಿ

✍️  ಜೊತೆಗೆ ಗುಂಡೇಟು ತಿನ್ನುವ ಎದೆಗಾರಿಕೆಯೂ ಬೇಕು.

---------------------

►   ಭಾರತದ ಅರ್ಥವ್ಯವಸ್ಥೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ

-ರಾಜನಾಥ್‌ಸಿಂಗ್, ಕೇಂದ್ರ ಸಚಿವ

✍️ ಸಾಂಕ್ರಾಮಿಕ ರೋಗದ ಹಾಗೆ.

---------------------

 ►  ನಮ್ಮ ಪೊಲೀಸರು ನಕ್ಸಲ್ ಬೇರುಗಳನ್ನು ಸಮರ್ಥವಾಗಿ ಕಿತ್ತುಹಾಕಿದ್ದಾರೆ - ರಾಮಲಿಂಗಾರೆಡ್ಡಿ, ಸಚಿವ

✍️  ನಕ್ಸಲರ ಸಾಮಾಜಿಕ ಬೇಡಿಕೆಗಳನ್ನೂ ಕೋವಿಯಿಂದಲೇ ಕಿತ್ತು ಹಾಕುವ ಉದ್ದೇಶವೇ?

---------------------

 ►  ನಮ್ಮಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಿಕೊಳ್ಳುವವರು ಸಾಕಷ್ಟಿದ್ದಾರೆ - ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

✍️ ಹಾಗೆಂದು ಸಾಕಷ್ಟು ಮುಖ್ಯಮಂತ್ರಿಗಳನ್ನು ನೇಮಕ ಮಾಡಲು ಸಾಧ್ಯವೇ?

---------------------

ಡಾ.ಜಿ.ಪರಮೇಶ್ವರ್ ಅವರೇ ಮುಂದಿನ ಮುಖ್ಯಮಂತ್ರಿ ಆಗಬೇಕು, ಮುಂದೆ ರಾಷ್ಟ್ರಪತಿಯೂ ಆಗಬೇಕು - ಜನಾರ್ದನ ಪೂಜಾರಿ, ಕಾಂಗ್ರೆಸ್ ಮುಖಂಡ

✍️  ಪ್ರಭಾಕರ ಭಟ್ಟರ ಮನೆಯಿಂದ ಮಾಡಿದ ಪತ್ರಿಕಾಗೋಷ್ಠಿಯೇ?

---------------------

►   ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ - ಜಾಫರ್ ಶರೀಫ್, ಕಾಂಗ್ರೆಸ್ ಮುಖಂಡ

✍️  ದೊಡ್ಡವರಾಗಲು ಹೋಗಿ ವಿಫಲರಾದವರ ಹೇಳಿಕೆ.

---------------------

►   ಯಶವಂತ ಸಿನ್ಹಾ ಈಗ ತಾನೇ ಉದ್ಯೋಗಕ್ಕೆ ಅರ್ಜಿ ಹಾಕಿರುವ 80ವರ್ಷದ ಯುವಕ

- ಅರುಣ್ ಜೇಟ್ಲಿ, ಕೇಂದ್ರ ಸಚಿವ

✍️  ಯುವಕರಿಗೆ ಉದ್ಯೋಗ ಕೊಡುವುದಿರಲಿ, ಹಿರಿಯ ಉದ್ಯೋಗಗಳನ್ನೇ ಕಿತ್ತುಕೊಂಡ ಹೆಗ್ಗಳಿಕೆ ತಮ್ಮ ಸರಕಾರದ್ದು.

---------------------

ರಾಹುಲ್ ಗಾಂಧಿ ಹಿಂದೂ ಹೌದೋ ಅಲ್ಲವೋ ಎನ್ನುವ ಬಗ್ಗೆ ನನಗೆ ಅನುಮಾನಗಳಿವೆ - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ

✍️ ಅವರು ಭಾರತೀಯ ಎನ್ನುವುದರ ಬಗ್ಗೆ ದೇಶದ ಜನರಿಗೆ ಅನುಮಾನವಿಲ್ಲ.

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...