ಸಿದ್ದಾಪುರ: ಗೂಡಂಗಡಿ ಮೇಲೆ ಕಾಡಾನೆ ದಾಳಿ
Update: 2017-10-02 17:44 IST
ಸಿದ್ದಾಪುರ, ಅ.2: ಅಂಗಡಿಯೊಂದರ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ಮಾಲ್ದಾರೆ ಗ್ರಾಪಂ ವ್ಯಾಪ್ತಿಯ ಘಟ್ಟದಳ್ಳದಲ್ಲಿ ರವಿವಾರ ರಾತ್ರಿ ನಡೆದಿದೆ.
ಸಿದ್ದಾಪುರ- ಮೈಸೂರು ರಸ್ತೆಯ ಘಟ್ಟದಳ್ಳ ತಿರುವಿನಲ್ಲಿರುವ ಆನಂದ ಎಂಬವರ ಗೂಡಂಗಡಿಯ ಮೇಲೆ ದಾಳಿ ಮಾಡಿರುವ ಕಾಡಾನೆ ಅಂಗಡಿಯೊಳಗಿದ್ದ ಪಾತ್ರೆಗಳು ಸೇರಿದಂತೆ ಸಾಮಗ್ರಿಗಳನ್ನು ಜಖಂಗೊಳಿಸಿದೆ.
ಸಮೀಪದಲ್ಲಿ ಬೀಡುಬಿಟ್ಟಿರುವ ಮೂರು ಕಾಡಾನೆಗಳ ಪೈಕಿ ಒಂದು ಕಾಡಾನೆ ದಾಳಿ ನಡೆಸಿದ್ದು, ಸ್ಥಳಕ್ಕೆ ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ಹಾಗೂ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.