ಮುಂಡಗೋಡ: ವ್ಯಕ್ತಿಯೊರ್ವನ ಮೇಲೆ ಮಾರಣಾಂತಿಕ ಹಲ್ಲೆ
Update: 2017-10-02 18:40 IST
ಮುಂಡಗೋಡ, ಅ.2: ಹಳೆ ದ್ವೇಶದಿಂದ ವ್ಯಕ್ತಿಯೊರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಾಲೂಕಿನ ಕುಸೂರ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಮಾರಣಾಂತಿಕ ಹಲ್ಲೆಗೊಳಗಾದವನನ್ನು ಕುಸೂರ ಗ್ರಾಮದ ರಾಧಕೃಷ್ಣ ರೇವಣಕರ(40) ಎಂದು ತಿಳಿದು ಬಂದಿದೆ.
ಹಲ್ಲೆ ಮಾಡಿದವರನ್ನು ಶಿವಲಾಲ ರಾಠೋಡ, ಅಶೋಕ ರಾಠೋಡ, ಸುನೀಲ ರಾಠೋಡ ಹಾಗೂ ಪಾರ್ವತಿ ರಾಠೋಡ ಎಂದು ಹೇಳಲಾಗಿದೆ.
ಒಂದು ವರ್ಷದ ಹಿಂದೆ ನಡೆದ ಘಟನೆಯಲ್ಲಿ ಹಲ್ಲೆಮಾಡಿದವರು ಮತ್ತು ಇತರರ ಮಧ್ಯ ಜಗಳ ನಡೆದಿತ್ತು ಈ ಜಗಳವನ್ನು ರಾಧಕೃಷ್ಣ ರೇವಣಕರ ಬಿಡಿಸಲು ಹೋಗಿದ್ದರು. ಇದೇ ವಿಷಯವನ್ನು ಇಟ್ಟುಕೊಂಡು ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ