ವ್ಯಕ್ತಿಯ ಮೇಲೆ ಕಾಡು ಹಂದಿ ದಾಳಿ
Update: 2017-10-02 18:55 IST
ಗುಂಡ್ಲುಪೇಟೆ, ಅ.2: ಶವಸಂಸ್ಕಾರಕ್ಕೆ ತೆರಳಿದ್ದ ವ್ಯಕ್ತಿಯ ಮೇಲೆ ಕಾಡುಹಂದಿ ದಾಳಿ ನಡೆಸಿದ ಪರಿಣಾಮ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ತಾಲೂಕಿನ ಕಲಿಗೌಡನಹಳ್ಳಿ ಗ್ರಾಮದ ಕೂಸೇಗೌಡ( 65) ತನ್ನ ಸಹೋದರ ಅಜ್ಜೇಗೌಡ ಎಂಬುವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದು ಮೂತ್ರವಿಸರ್ಜನೆಗೆ ಬೇಲಿಯತ್ತ ತೆರಳಿದ್ದಾಗ ಹಠಾತ್ತನೆ ಕಾಡುಹಂದಿ ದಾಳಿ ನಡೆಸಿದೆ.
ಘಟನೆಯಲ್ಲಿ ಕೂಸೇಗೌಡರ ತೊಡೆಯ ಭಾಗದ ಮಾಂಸಖಂಡ ಕಿತ್ತುಬಂದಿದ್ದು ಗಾಯಾಳುವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ದಿದ್ದಾರೆಂದು ತಿಳಿದು ಬಂದಿದೆ.