ಪೆಟ್ರೋಲ್ ಸುರಿದು ಯುವಕ ಆತ್ಮಹತ್ಯೆ
Update: 2017-10-02 22:02 IST
ಚಿಕ್ಕಬಳ್ಳಾಪುರ, ಅ. 35 ವರ್ಷದ ಯುವಕನೊಬ್ಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅರೂರು ಗ್ರಾಮದ ಬಳಿ ನಡೆದಿದೆ.
ಸಜೀವ ದಹನವಾದ ಯುವಕನನ್ನು ಚಿಕ್ಕಬಳ್ಳಾಪುರ ತಾಲೂಕಿನ ಪೇರೆಸಂದ್ರ ನಿವಾಸಿ ರಘು(35) ಎಂದು ಗುರ್ತಿಸಲಾಗಿದ್ದು, ಜೀವನದಲ್ಲಿ ಜುಗುಪ್ಸೆ ಗೊಂಡು ಆತ್ಮಹತ್ಯೆಗೆ ಮುಂದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ರಘು ಇತ್ತಿಚಿಗೆ ಮಾನಸಿಕ ಅಸ್ವಸ್ಥನಾಗಿದ್ದ ಎನ್ನಲಾಗಿದ್ದು, ಸೋಮವಾರ ಬೇಳಗಿನ ಜಾವ ಮನೆಯಿಂದ ಹೊರ ಹೋದವ ಇಂತಹ ಕೃತ್ಯಕ್ಕೆ ಮುಂದಾಗಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ.
ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ಸಮೀಪ ಹೋಗುವಷ್ಟರಲ್ಲಿ ದೇಹ ಸುಟ್ಟು ಕರಲಾಗಿದ್ದು, ಸ್ಥಳಿಯರು ಬೆಂಕಿ ನಂದಿಸಿದ ನಂತರ ಮೃತನ ಗುರುತು ಪತ್ತೆಯಾಗಿದೆ.
ಈ ಸಂಬಂಧ ಗುಡಿಬಂಡೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.