×
Ad

ರಾಮರಾಜ್ಯದ ಕನಸಿನ ಸಾಕಾರಕ್ಕೆ ಗಾಂಧೀಜಿ ತತ್ವಾನುಸರಣೆ ಅಗತ್ಯ: ಸಂಸದ ಧ್ರುವ ನಾರಾಯಣ

Update: 2017-10-02 22:24 IST

ಕೊಳ್ಳೇಗಾಲ, ಅ.2: ಮಹಾತ್ಮ ಗಾಂಧಿಜೀಯವರ ತತ್ವ ಸಿದ್ಧಾಂತಗಳನ್ನು ತಪ್ಪದೇ ಪಾಲಿಸುವ ಮೂಲಕ ಎಲ್ಲರೂ ಒಂದಾಗಿ ದೇಶದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಸಂಸದ ಆರ್. ಧ್ರುವ ನಾರಾಯಣ ಕರೆ ನೀಡಿದ್ದಾರೆ.

ತಾಲೂಕಿನ ಮಧುವನಹಳ್ಳಿ ಗ್ರಾಪಂ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಾತ್ಮಾ ಗಾಂಧೀಜಿ ಅವರ 148ನೆ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸತ್ಯ ಮತ್ತು ಅಹಿಂಸೆಯ ಮೂಲಕ ಬ್ರಿಟಿಷರಿಂದ ದೇಶದ ದಾಸ್ಯವನ್ನು ಹೋಗಲಾಡಿಸಿದ ಗಾಂಧೀಜಿಯವರ ಸರಳತೆ ಮತ್ತು ಸಜ್ಜನಿಕೆಯ ಆದರ್ಶಗಳನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ಅವರು ಹಿಂದೆ ಕರೆ ನೀಡಿದಂತೆ ವಿದೇಶಿ ವಸ್ತುಗಳನ್ನು ತಿರಸ್ಕರಿಸಿ ಸ್ವದೇಶಿ ವಸ್ತುಗಳನ್ನು ಬಳಸಲು ಎಲ್ಲರೂ ಮುಂದಾಗೋಣ ಎಂದು ಕರೆ ನೀಡಿದರು.

ಹನೂರು ಶಾಸಕ ಆರ್.ನರೇಂದ್ರ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಆಶಯದಂತೆ ದೇಶ ಸಾಗಿದ್ದರೆ ರಾಮರಾಜ್ಯದ ಕನಸು ಎಂದೋ ನನಸಾಗುತಿತ್ತು. ಈ ನಿಟ್ಟಿನಲ್ಲಿ ಇನ್ನೂ ಕಾಲ ಮಿಂಚಿಲ್ಲವಾಗಿದ್ದು, ಗಾಂಧೀಜಿಯವರ ಜೀವನವನ್ನು ಅನುಸರಿಸುವ ಮೂಲಕ ಅವರ ಕನಸನ್ನು ನನಸು ಮಾಡೋಣ ಎಂದರು.

ಈ ವೇಳೆ ಧ್ರುವನಾರಾಯಣ ಹಾಗೂ ಶಾಸಕ ನರೇಂದ್ರ ಅವರಿಗೆ ಮಧುವನಹಳ್ಳಿ ಗ್ರಾಪಂ ಅಧ್ಯಕ್ಷೆ ಹಾಗೂ ಸದಸ್ಯರು ಅಂಬೇಡ್ಕರ್ ಪಾರಿತೋಷಕ ನೀಡಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಶಿವಕುಮಾರ್, ಮಧುವನಹಳ್ಳಿ ನಂಜುಂಡಸ್ವಾಮಿ, ತೋಟೇಶ್, ಗ್ರಾಪಂ ಅಧ್ಯಕ್ಷೆ ಕಲ್ಯಾಣಮ್ಮ, ಸದಸ್ಯರಾದ ಮಹದೇವಪ್ರಭು, ನಂಜಪ್ಪ, ಸತೀಶ್, ಯಶೋಧಮ್ಮ, ಸಣ್ಣಪ್ಪ, ರಾಮಸ್ವಾಮಿ, ಮಹದೇವಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಶಿವ ದರ್ಶನ ಭವನ ಉದ್ಘಾಟನೆ

ಕೊಳ್ಳೇಗಾಲ, ಅ.2: ತಾಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ಸೋಮವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾನಿಲಯದ ರಾಜಯೋಗ ಶಿಕ್ಷಣ ಕೇಂದ್ರದ ಶಿವದರ್ಶನ ಭವನವನ್ನು ಸಂಸದ ಆರ್.ಧ್ರುವನಾರಾಯಣ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಮೌಢ್ಯತೆ ಹಾಗೂ ಕಂದಾಚಾರವನ್ನು ನಿರ್ಮೂಲನೆ ಮಾಡುವ ದಿಕ್ಕಿನಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾನಿಲಯ ಉತ್ತಮ ಕೆಲಸ ಮಾಡುತ್ತಿದೆ ಎಂದು  ಹೇಳಿದರು.

ಈ ಸಂದರ್ಭದಲ್ಲಿ ಹನೂರು ಶಾಸಕ ಆರ್.ನರೇಂದ್ರ, ಕರುಣಾಜಿ ಮಾತನಾಡಿದರು. ಲಕ್ಷ್ಮೀಜಿ, ಪ್ರಭಾಮಣಿ, ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಮಾಜಿ ಜಿಪಂ ಸದಸ್ಯ ಶಿವಕುಮಾರ್, ಜಿಲ್ಲಾ ಹಾಲು ಒಕ್ಕೂಟದ ಸದಸ್ಯ ಮಧುವನಹಳ್ಳಿ ನಂಜುಂಡಸ್ವಾಮಿ, ತೋಟೇಶ್, ತಾಪಂ ಸದಸ್ಯ ಸಿದ್ದಪ್ಪಾಜಿ, ಗ್ರಾಪಂ ಅಧ್ಯಕ್ಷೆ ಕಲ್ಯಾಣಮ್ಮ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News