ಶೋಷಣೆ ನಿವಾರಣೆಗೆ ಮಾನವ ಹಕ್ಕುಗಳ ಸಂರಕ್ಷಣೆ ಅಗತ್ಯ: ಮೋಹನ್ ಕುಮಾರ್
ಬಣಕಲ್, ಅ.3: ಸಮಾಜದಲ್ಲಿನ ಅಸಮಾನತೆ ಹಾಗೂ ಶೋಷಣೆ ನಿವಾರಣೆಗೆ ಮಾನವ ಹಕ್ಕುಗಳ ಸಂರಕ್ಷಣೆ ಅಗತ್ಯವಾಗಿದ್ದು, ಅವುಗಳ ಉಲ್ಲಂಘನೆಯಾಗದಂತೆ ತಡೆಯುವುದು ಮತ್ತು ಸಂರಕ್ಷಿಸುವುದು ನಮ್ಮ ಕರ್ತವ್ಯ ಎಂದು ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿಗ್ರಹ ಸಂಸ್ಥೆಯ ರಾಜ್ಯಾಧ್ಯಕ್ಷ ಮೋಹನ್‍ಕುಮಾರ್ ಹೇಳಿದ್ದಾರೆ.
ಕೆಳಗೂರಿನಲ್ಲಿ ಸ್ಥಾಪನೆಯಾದ ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿಗ್ರಹ ಸಂಸ್ಥೆಯ ಬಾಳೂರು ಹೋಬಳಿ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿನಿತ್ಯ ಹಲವು ಸಂದರ್ಭದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಯುವ ಜನತೆ ಹಕ್ಕುಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಯತ್ನಿಸಬೇಕು. ಹಕ್ಕುಗಳ ಸಂರಕ್ಷಣೆಗೆ ಸಂಘಟಿತ ಪ್ರಯತ್ನದ ಅಗತ್ಯವಿದೆ. ಕಾನೂನು ಅರಿವಿನ ಕೊರತೆಯಿಂದ ಶೋಷಿತವರ್ಗ ಬದುಕುವಂತಾಗಿದೆ ಎಂದರು.
ರಾಜ್ಯ ಉಪಾಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಕಾರ್ಮಿಕರು, ಮಕ್ಕಳು ಮತ್ತು ಮಹಿಳೆಯರ ಬಹುತೇಕ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ. ಮಾನವ ಹಕ್ಕುಗಳನ್ನು ಗೌರವಿಸಿ ಮೌಲ್ಯಾಧಾರಿತ ಜೀವನ ನಡೆಸಲು ಅವಕಾಶ ಕೊಟ್ಟಾಗ ಮಾನವ ಹಕ್ಕುಗಳ ರಕ್ಷಣೆಯಾಗುತ್ತದೆ ಎಂದು ಹೇಳಿದರು.
ಈ ವೇಳೆ ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಬಾಳೂರು ಹೋಬಳಿ ಶಾಖೆ ಅಧ್ಯಕ್ಷರಾಗಿ ಶಿವಕುಮಾರ್, ಉಪಾಧ್ಯಕ್ಷರಾಗಿ ರಘು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ಗುರುದೇವ್, ಬಾಳೂರು ಹೋಬಳಿ ಅಧ್ಯಕ್ಷ ಶಿವಕುಮಾರ್, ಜಾನ್‍ನೊರೊನ್ನಾ, ಶಿವರಾಜ್‍ಕುಮಾರ್, ಪ್ರಮೋದ್, ಉದಯ್, ಸುರೇಂದ್ರ, ವಿನೋದ್, ರವಿ, ಕಿರಣ್, ಎನ್.ದೊರೆಸ್ವಾಮಿ, ರಾಜೇಶ್, ಅಣ್ಣಪ್ಪ, ಸೆಲ್ವಕುಮಾರ್, ಬಸವರಾಜು, ಮಂಜು, ಕೆ.ದೊರಸ್ವಾಮಿ, ಲತೀಶ್, ಸಂಜೀತ್ ಮತ್ತಿತರರಿದ್ದರು.