×
Ad

ಕನ್ನಡದ ಕವಿ-ಸಾಹಿತಿಗಳು ಗಾಂಧೀಜಿಯವರ ಅನುಯಾಯಿಗಳಾಗಿದ್ದರು: ವೈ.ಎಸ್.ವಿ. ದತ್ತ

Update: 2017-10-03 22:49 IST

ಕಡೂರು, ಅ.3: ಗಾಂಧೀಜಿಯವರಿಗೂ ಕನ್ನಡದ ಕವಿ-ಸಾಹಿತಿಗಳಿಗೂ ಅವಿನಾಭಾವ ಸಂಬಂಧವಾಗಿತ್ತು. ಕವಿ-ಸಾಹಿತಿಗಳು ಗಾಂಧೀಜಿಯವರ ಅನುಯಾಯಿಗಳಾಗಿದ್ದರು ಎಂದು ಶಾಸಕ ವೈ.ಎಸ್.ವಿ.ದತ್ತ ತಿಳಿಸಿದ್ದಾರೆ.

ಕಸಾಪ ನಗರ ಘಟಕ, ತಾಲೂಕು ಘಟಕದ ವತಿಯಿಂದ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದ್ದ ಕನ್ನಡದ ಕವಿಗಳು ಕಂಡಂತೆ ಗಾಂಧೀಜಿ ಎಂಬ ವಿಷಯದ ಬಗ್ಗೆ ದತ್ತಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಗಾಂಧೀಜಿ ಒಬ್ಬ ಸಾಹಿತಿ ಕವಿಯೂ ಅಲ್ಲ, ಇವರ ಬಗ್ಗೆ ಪ್ರಭಾವ ಹೆಚ್ಚಾಗಿ ಕನ್ನಡದಲ್ಲಿ ಸಾಹಿತ್ಯ ಹೆಚ್ಚಾಗಿದೆ. ಗಾಂಧೀಜಿಯವರ 2000 ಪುಟಗಳ ಪುಸ್ತಕ ಕನ್ನಡದಲ್ಲಿ ಇದೆ. ಇದನ್ನು ಸರ್ಕಾರ ಸಾವಿರ ಪುಟಗಳಿಗೆ ತಿಳಿಸಿ ಪುಸ್ತಕ ರೂಪದಲ್ಲಿ ಹೊರ ತಂದಿತ್ತು ಎಂದರು.

ಅಣುಬಾಂಬ್ ಕಂಡು ಹಿಡಿದ ಐನ್‍ಸ್ಟೀನ್ ಗಾಂಧೀಜಿಯವರ ಅನುಯಾಯಿಯಾಗಿದ್ದರು. ಕನ್ನಡ ಸಾಹಿತಿಗಳು ಗಾಂಧೀಜಿಯವರ ಅನುಯಾಯಿಗಳಾಗಿ ಅವರ ಚಳವಳಿಯಲ್ಲಿ ಭಾಗಿಯಾಗಿದ್ದರು. ಗಾಂಧಿಯವರು ಜಗತ್ತಿನ ನೆಲದಲ್ಲಿ ಹುಟ್ಟಿರುವುದು ಯುಗ ಯುಗದಲ್ಲಿ ಇಂತಹ ವ್ಯಕ್ತಿಗಳು ಹುಟ್ಟುವುದು ವಿರಳ ಎಂದರು. 

ಕಾಋ್ಯಕ್ರಮದಲ್ಲಿ ತಾಲೂಕು ಕಸಾಪ ಅಧ್ಯಕ್ಷ ವೈ.ಎಸ್.ರವಿಪ್ರಕಾಶ್ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್, ನಗರ ಘಟಕ ಅಧ್ಯಕ್ಷ ಎ. ಮಣಿ, ಜಿಲ್ಲಾ ಕ.ಸಾ.ಪ. ಕೋಶಾಧ್ಯಕ್ಷ ಕೆ.ಎನ್. ಲಕ್ಷ್ಮಿಕಾಂತ್, ಯಗಟಿ ರಂಗಪ್ಪ, ಹೊಸೂರು ಪುಟ್ಟರಾಜು, ಎನ್.ಎಚ್. ನಂಜುಂಡಸ್ವಾಮಿ, ಜಿ. ಸೂರಿ, ರೋಟರಿ ಕೃಷ್ಣಮೂರ್ತಿ, ಅಚ್ಯುತರಾವ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News