ಟ್ರಾಫಿಕ್ ಜಾಮ್: 2 ಕಿ.ಮೀ. ನಡೆದ ಇಂಡೋನೇಶ್ಯ ಅಧ್ಯಕ್ಷ!

Update: 2017-10-05 17:01 GMT

ಜಕಾರ್ತ (ಇಂಡೋನೇಶ್ಯ), ಅ. 5: ಇಂಡೋನೇಶ್ಯದ ‘ಕುಖ್ಯಾತ’ ಟ್ರಾಫಿಕ್ ಜಾಮ್ ಗುರುವಾರ ಜಗತ್ತಿನ ಗಮನ ಸೆಳೆಯಿತು! ಸ್ವತಃ ಅಧ್ಯಕ್ಷ ಜೊಕೊ ವಿಡೋಡೊ ಸುಡುವ ಬಿಸಿಲಿನಲ್ಲಿ ಎರಡು ಕಿ.ಮೀ. ದೂರ ನಡೆದು ಇಂಡೋನೇಶ್ಯ ಸೇನೆಯ 72ನೆ ಸ್ಥಾಪಕ ದಿನಾಚರಣೆಯಲ್ಲಿ ಪಾಲ್ಗೊಳ್ಳಬೇಕಾಯಿತು!!

ರಾಜಧಾನಿ ಜಕಾರ್ತದಿಂದ ಎರಡೂವರೆ ಗಂಟೆ ಪ್ರಯಾಣದ ಸಿಲೆಗಾನ್ ನಗರಕ್ಕೆ ಅಧ್ಯಕ್ಷರು ಕಾರಿನಲ್ಲೇ ಪ್ರಯಾಣಿಸಿದರಾದರೂ, ಗುರಿ ತಲುಪಲು ಎರಡು ಕಿ.ಮೀ. ಇರುವಾಗ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡರು.

ಅರ್ಧ ಗಂಟೆ ಆದರೂ ಸಾರಿಗೆ ಸುಗಮವಾಗದಾಗ ಅಧ್ಯಕ್ಷರು ಕಾರಿನಿಂದ ಇಳಿದು ನಡೆಯಲು ಆರಂಭಿಸಿದರು. ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಅವರನ್ನು ಹಿಂಬಾಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News