ಹಾದಿಯಾ ಪ್ರಕರಣವನ್ನು ಎನ್‍ಐಎ ತನಿಖೆ ಮಾಡಬೇಕಾದ ಅಗತ್ಯವಿಲ್ಲ: ಕೇರಳ ಸರಕಾರ

Update: 2017-10-07 10:32 GMT

ಹೊಸದಿಲ್ಲಿ,ಅ.7: ಹಾದಿಯಾ ಪ್ರಕರಣವನ್ನು ಎನ್‍ಐಎ ತನಿಖೆ ಮಾಡಬೇಕಾದ ಅಗತ್ಯವಿಲ್ಲ ಎಂದು ಕೇರಳ ಸರಕಾರ ಸುಪ್ರೀಂಕೋರ್ಟಿಗೆ ಅಫಿದಾವಿತ್ ಸಲ್ಲಿಸಿದೆ. ಕೇರಳದ ಕ್ರೈಂಬ್ರಾಂಚ್ ಪ್ರಕರಣದಲ್ಲಿ ವಸ್ತು ನಿಷ್ಠ ತನಿಖೆ ನಡೆಸಿದೆ, ಎನ್‍ಐಎ ತನಿಖೆ ನಡೆಸಬೇಕಾದ ಅಪರಾದಗಳು ಅದರಲ್ಲಿಲ್ಲ ಎಂದು ಸುಪ್ರೀಂಕೋರ್ಟಿಗೆ ಕೇರಳ ಸರಕಾರ ತಿಳಿಸಿದೆ. ಎನ್‍ಐಎ ತನಿಖೆ ಬೇಕಾಗಿದ್ದರೆ ಕೇಂದ್ರಕ್ಕೆ ತಿಳಿಸಲಾಗುತ್ತಿತು. ಅಂತಹ ಅಪರಾಧ ಇದುವರೆಗೂ ಕಂಡು ಬಂದಿಲ್ಲ ಎಂದು ಸುಪ್ರೀಂಕೋರ್ಟಿಗೆ ಸರಕಾರ ತಿಳಿಸಿದೆ.

ಹಾದಿಯಾಳ ಸಂರಕ್ಷಣೆ ಹಕ್ಕು ಇರುವುದು ಕೇವಲ ತಂದೆಗೆ ಮಾತ್ರವಲ್ಲ. 24ವರ್ಷದಯುವತಿಯನ್ನು ಕೂಡಿಹಾಕಲು ತಂದೆಗೆ ಅಧಿಕಾರ ಇಲ್ಲ. ಹಾದಿಯಾಳಿಗೆ ಸ್ವಯಂ ಆಯ್ಕೆಯ   ಹಕ್ಕಿದೆ. ಮದುವೆ ರದ್ದು ಮಾಡುವ ಅಧಿಕಾರವು ಹೈಕೋರ್ಟಿಗೆ ಇದೆಯೇ ಎನ್ನುವುದನ್ನು  ಪರಿಶೀಲಿಸಲಾಗುವುದು ಎಂದು ಸುಪ್ರೀಂಕೋರ್ಟು ಇತ್ತೀಚೆಗೆ ಈ ಪ್ರಕರಣದ ವಿಚಾರಣೆ ವೇಳೆ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News