ಹನೂರು: ಧಾರಾಕಾರ ಮಳೆಗೆ ಸೇತುವೆ ಕುಸಿತ
ಹನೂರು, ಅ.7: ತಾಲೂಕಿನಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ವಡಕೆಹಳ್ಳದ ಬಳಿ ಸೇತುವೆ ಕುಸಿತಗೂಂಡ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿ ಉಂಟಾದ ಘಟನೆ ಶನಿವಾರ ನಡೆದಿದೆ.
ಮಲೈಮಹದೇಶ್ವರಬೆಟ್ಟಕ್ಕೆ ತೆರಳುವ ರಸ್ತೆ ಹಾಗೂ ವಡಕೆಹಳ್ಳದ ದರ್ಗಾ ಸಮೀಪ ನೂತುನ ಸೇತುವೆ ನಿರ್ಮಾಣವಾಗುವ ವರೆಗೂ ಸಂಚಾರಕ್ಕೆ ಬದಲಿ ಸೇತುವೆ ನಿರ್ಮಾಣ ಮಾಡಿದ ಮಣ್ಣಿನ ಸೇತುವೆಗೆ ಗುಡ್ಡಗಳಿಂದ ಹರಿದು ಬಂದ ಮಳೆ ನೀರಿನ ರಭಸಕ್ಕೆ ಮಣ್ಣು ಕೊಚ್ಚಿ ಹೋಗಿದ್ದು, ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಸ್ಥಳೀಯರಿಂದ ಮಣ್ಣು ತುಂಬಿ ಸಂಚಾರಕ್ಕೆ ಅನುವು ಮಾಡಲು ಪ್ರಯತ್ನ: ರಾಜ್ಯದ ಪ್ರಸಿದ್ಧ ಪುಣ್ಯ ಕ್ಷೇತ್ರ ಮಲೈಮಹದೇಶ್ವರ ಬೆಟ್ಟಕ್ಕೆ ಪ್ರತಿನಿತ್ಯ ಸಾವಿರಾರು ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ ಆದರೆ ಹೋಗುವ ಸಂಪರ್ಕ ಸೇತುವೆ ವಡಕೆಹಳ್ಳದ ಗ್ರಾಮದಲ್ಲಿ ನೂತನವಾಗಿ ನೀರ್ಮಾಣವಾಗುತ್ತಿದ್ದರೂ, ಸೇತುವೆ ಕಾಮಗಾರಿ ಮುಕ್ತಾಯವರೆಗೂ ಭಕ್ತರ ಸಂಚಾರಕ್ಕಾಗಿ ಬದಲಿ ಸೇತುವೆಯನ್ನು ನಿರ್ಮಿಸಲಾಗಿತ್ತು. ಆದರೆ ಕಾಡಂಚಿನಿಂದ ಬಂದ ಮಳೆ ನೀರಿನಿಂದ ಸಂಪೂರ್ಣವಾಗಿ ಜಲಾವೃತಗೂಂಡು ಸೇತುವೆಯ ಮಣ್ಣು ಕುಸಿಯಿತು. ಇದ್ದನ್ನು ಸ್ಥಳೀಯರು ಮಹದೇಶ್ವರ ಬೆಟ್ಟಕ್ಕೆ ಹೋಗುವ ಭಕ್ತರಿಗೆ ತೆರಳಲು ಅನುವು ಮಾಡಿಕೂಳ್ಳಲು ಪ್ರಯತ್ನ ಪಟ್ಟರೂ ನೀರಿನ ರಭಸಕ್ಕೆ ಕೂಚ್ಚಿಕೂಂಡು ಹೋಗಿದೆ.
ಈ ವೇಳೆ ಸ್ಥಳಕ್ಕೆ ಶಾಸಕ ಆರ್. ನರೇಂದ್ರರಾಜೂಗೌಡ ಭೇಟಿ ನೀಡಿ, ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ತುರ್ತಾಗಿ ಸಂಚಾರಕ್ಕೆ ಅನುವುಮಾಡಿಕೂಡುವಂತೆ ಸೂಚನೆ ನೀಡಿದ್ದಾರೆ.