ಚಿಕ್ಕಮಗಳೂರು: ನಲ್ಲಿ ವಾಲ್ ಗುಂಡಿ ಮುಚ್ಚಲು ಮನವಿ
ಚಿಕ್ಕಮಗಳೂರು, ಅ.7: ದೀಪಾ ನರ್ಸಿಂಗ್ ಹೋಂ ಎದುರುಗಡೆಯ ಬೈಪಾಸ್ ಲಿಂಕ್ ರಸ್ತೆಯಲ್ಲಿರುವ ನಲ್ಲಿ ವಾಲ್ ಗುಂಡಿಗಳನ್ನು ಮುಚ್ಚಲು ಒತ್ತಾಯಿಸಿ ಲಕ್ಷ್ಮೀಶ ನಗರ ಮತ್ತು ಶಂಕರಪುರ ವಾರ್ಡ್ ನಂ 10 ನಿವಾಸಿಗಳ ಹಿತರಕ್ಷಣಾ ವೇದಿಕೆ ನಗರಸಭೆೆ ಆಯುಕ್ತರಿಗೆ ಮನವಿ ಸಲ್ಲಿಸಿ ಶನಿವಾರ ಒತ್ತಾಯಿಸಿದೆ.
ಬೈಪಾಸ್ ರಸ್ತೆಯಲ್ಲಿ ಎರಡು ಬದಿಗಳಲ್ಲಿ ನಲ್ಲಿಯ ವಾಲ್ ಗುಂಡಿ ಇದೆ. ರಸ್ತೆಯ ಎರಡು ಅಡಿ ಜಾಗ ಆಕ್ರಮಿಸಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿ ವಾಹನಗಳ ದಟ್ಟಣೆ ಆಗುತ್ತದೆ. ಇದರಿಂದ ಶಾಲಾ ಮಕ್ಕಳು, ವೃದ್ಧರು, ತುರ್ತು ಚಿಕಿತ್ಸೆ ವಾಹನಗಳು ಹಾಗೂ ಕರ್ತವ್ಯ ನಿರತ ಅಧಿಕಾರಿಗಳ ವಾಹನಗಳಿಗೆ ಅಡಚಣೆಯಾಗಿ ತೊಂದರೆಯಾಗುತ್ತಿದೆ ಎಂದು ಸಮಿತಿ ಆರೋಪಿಸಿದೆ.
ಆದ್ದರಿಂದ ನಲ್ಲಿ ವಾಲ್ ಗುಂಡಿಗಳಿಗೆ ಅಗಲವಾದ ಪೈಪ್ ಅಳವಡಿಸಿ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಬೇಕು. ಹಾಗೆ ರಸ್ತೆಯ ಎರಡು ಬದಿಗಳಲ್ಲಿರುವ ತ್ಯಾಜ್ಯ ವಸ್ತುಗಳನ್ನು ತೆಗೆಸಿ ಎರಡು ಬದಿಗಳಿಗೆ ಗ್ರಾವೆಲ್ ಹಾಕಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಮಯದಲ್ಲಿ ಲಕ್ಷ್ಮೀಶ ನಗರ-ಶಂಕರಪುರ ನಿವಾಸಿಗಳ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸತ್ಯನಾರಾಯಣ, ರುದ್ರಪ್ಪ, ವಿಜಯ್, ಸತೀಶ್, ನವೀನ್, ವಿಶ್ವನಾಥ್ ಮತ್ತಿತರರಿದ್ದರು.