‘ಸ್ಟಾಪ್ ಅದಾನಿ’..!

Update: 2017-10-07 18:27 GMT

ಭಾರತೀಯ ಗಣಿ ದೈತ್ಯ ಅದಾನಿ ಎಂಟರ್‌ಪ್ರೈಸಸ್‌ನ ಕಾರ್ಮಿಕೇಲ್ ಕಲ್ಲಿದ್ದಲು ಗಣಿ ವಿರುದ್ಧ ಶನಿವಾರ ಆಸ್ಟ್ರೇಲಿಯದಾದ್ಯಂತ ಬೃಹತ್ ಪ್ರತಿಭಟನೆಗಳು ನಡೆದವು. ಆಸ್ಟ್ರೇಲಿಯದ ಅತ್ಯಂತ ದೊಡ್ಡ ಕಲ್ಲಿದ್ದಲು ಗಣಿಯಾಗಿರುವ ಕಾರ್ಮಿಕೇಲ್, ಪರಿಸರ ಮತ್ತು ಹಣಕಾಸು ವಿವಾದಗಳ ಹಿನ್ನೆಲೆಯಲ್ಲಿ ಹಲವಾರು ವರ್ಷಗಳಷ್ಟು ವಿಳಂಬಗೊಂಡಿದೆ. ಕ್ವೀನ್ಸ್‌ಲ್ಯಾಂಡ್ ರಾಜ್ಯದಲ್ಲಿರುವ ಗಣಿಯು ಜಾಗತಿಕ ತಾಪಮಾನಕ್ಕೆ ಕಾರಣವಾಗುತ್ತದೆ ಹಾಗೂ ಗ್ರೇಟ್ ಬ್ಯಾರಿಯರ್ ರೀಫ್‌ಗೆ ಹಾನಿಯುಂಟುಮಾಡುತ್ತದೆ ಎಂದು ಪರಿಸರ ಗುಂಪುಗಳು ಆರೋಪಿಸಿವೆ. ‘ಸ್ಟಾಪ್ ಅದಾನಿ’ ಚಳವಳಿಯು 45 ಪ್ರತಿಭಟನೆಗಳನ್ನು ನಡೆಸಿದೆ. ಸಿಡ್ನಿಯ ಬೊಂಡಿ ಬೀಚ್‌ನಲ್ಲಿ 1,000ಕ್ಕೂ ಅಧಿಕ ಜನರು ‘ಸ್ಟಾಪ್ ಅದಾನಿ’ ಎಂಬ ಬರಹ ಮೂಡುವಂತೆ ಆಕೃತಿ ನಿರ್ಮಿಸಿದರು ಎಂದು ಸಂಘಟಕಿ ಬ್ಲೇರ್ ಪ್ಯಾಲೀಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor