ಹೊಟ್ಟೆನೋವು ತಾಳಲಾರದೆ ಗೃಹಿಣಿ ಆತ್ಮಹತ್ಯೆ
Update: 2017-10-08 19:11 IST
ಮದ್ದೂರು, ಅ.8: ಹೊಟ್ಟೆ ನೋವು ತಾಳಲಾರದೆ ತಾಲೂಕಿನ ಕಬ್ಬಾರೆ ಗ್ರಾಮದ ಸಿದ್ದರಾಜು ಪತ್ನಿ ಶೋಭಾ(20) ರವಿವಾರ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶೋಭಾ ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದು, ಪ್ರತಿನಿತ್ಯ ಬರುತಿದ್ದ ಹೊಟ್ಟೆನೋವು ತಾಳಲಾರದೆ ಮನೆ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.