ಹಲ್ಲೆ ಪ್ರಕರಣ: ಆರೋಪಿಗೆ 10 ವರ್ಷ ಜೈಲು ಶಿಕ್ಷೆ
ತುಮಕೂರು, ಅ.8: ಪಡೆದಿದ್ದ ಸಾಲ ಹಿಂದಿರುಗಿಸುವಂತೆ ಕೇಳಿದ್ದಕ್ಕಾಗಿ ಜಾತಿ ನಿಂದನೆ ಮಾಡಿ, ಮಾರಕ ಆಯುಧದಿಂದ ಮಾರಾಣಾಂತಿಕ ಹಲ್ಲೆ ನಡೆಸಿದ್ದ ಆರೋಪಿಗೆ ತುಮಕೂರಿನ ಮೂರನೆ ಹೆಚ್ಚುವರಿ ಅಪರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ 20 ಸಾವಿರ ರೂ. ದಂಡ ಮತ್ತು 10 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ತುಮಕೂರು ನಗರದ ಕ್ಯಾತ್ಸಂದ್ರದ ಸುಭಾಷ್ ನಗರದದ ನಿವಾಸಿ ಮಂಜುನಾಥ್ ಶಿಕ್ಷೆಗೆ ಒಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಮಂಜುನಾಥ್ 2012ರ ಜನವರಿ 22 ರಂದು ಸಾಲ ಹಿಂದಿರುಗಿಸುವಂತೆ ಕೇಳಲು ಬಂದ ಪರಿಶಿಷ್ಟ ಜಾತಿಗೆ ಸೇರಿದ ಮಂಜುನಾಥ್ ಎಂಬವವರ ಮೇಲೆ ಮಚ್ಚಿನಿಂದ ಮನ ಬಂದಂತೆ ಹಲ್ಲೆ ಮಾಡಿದಲ್ಲದೆ, ಜಾತಿ ನಿಂದನೆ ಮಾಡಿ, ಹಲ್ಲೆಯಿಂದ ಮಂಜುನಾಥನ ಬಲಗೈ ಸ್ವಾಧೀನ ಕಳೆದುಕೊಂಡಿತ್ತು. ಈ ಸಂಬಂಧ ತನಿಖೆ ನಡೆಸಿ ಕ್ಯಾತ್ಸಂದ್ರ ಪಿ.ಎಸ್.ಐ ವಿಜಯಕುಮಾರ್ ನ್ಯಾಯಾಲಯಕ್ಕೆ ದೋಷಾ ರೋಪಣೆ ಪಟ್ಟಿ ಸಲ್ಲಿಸಿದ್ದರು.
ಸದರಿ ಪ್ರಕರಣದ ತನಿಖೆ ನಡೆಸಿ 3ನೆ ಅಪರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾದೀಶ ಕಟ್ಟಿಮನಿ ಅವರು ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ ಹಾಗೂ 20 ಸಾವಿರ ರೂ. ದಂಢ ವಿಧಿಸಿದ್ದಾರೆ.