ಉಪ್ಪಾರ ಸಮಾಜ ಎಸ್ಟಿಗೆ ಸೇರ್ಪಡೆಗೊಳಿಸಲು ಆಗ್ರಹ
ದಾವಣಗೆರೆ, ಅ.8: ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದಿರುವ ಉಪ್ಪಾರ ಸಮಾಜವನ್ನು ಪ್ರವರ್ಗ-1ರಿಂದ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎಂದು ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ರವಿವಾರ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಭಗೀರಥ ಉಪ್ಪಾರ ಯುವಕರ ಸಂಘದ ಉದ್ಘಾಟನೆ, ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉಪ್ಪಾರ ಸಮಾಜ ಆರ್ಥಿಕ, ಶೈಕ್ಷಣಿಕ, ರಾಜಕೀಯ, ಸಾಮಾಜಿಕ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಹಿಂದುಳಿದ್ದು, ಈಗಾಗಲೇ ಸಾಕಷ್ಟು ಬಾರಿ ಉಪ್ಪಾರ ಜನಾಂಗಕ್ಕೆ ಮೀಸಲಾತಿ ಕಲ್ಪಿಸಿಕೊಂಡುವಂತೆ ಹೋರಾಟ, ಒತ್ತಾಯ, ಮನವಿಗಳನ್ನು ಮಾಡಿದರೂ ಯಾವುದೇ ರೀತಿಯ ಪ್ರಯೋಜನೆಗಳು ಆಗಿಲ್ಲ. ಸರಕಾರ ಮನವಿಗಳನ್ನು ಪರಿಗಣಿಸುತ್ತಿಲ್ಲ. ಇದರ ಬಗ್ಗೆ ಸಮಾಲೋಚನೆ ನಡೆಸಬೇಕು ಎಂದು ಹೇಳಿದರು.
ಸಮಾಜದ ಲೇಪಾಕ್ಷಿ ಸ್ವಾಮೀಜಿ ಮತ್ತೆ ಎಲ್ಲರನ್ನೂ ಒಟ್ಟೂಗೂಡಿಸಿ ಮೀಸಲಾತಿಗಾಗಿ ಒತ್ತಾಯಿಸಿದರು. ವಾಲ್ಮೀಕಿ, ಬೇಡರು, ನಾಯಕರಿಗೆ ಸಿಗುವ ಮೀಸಲಾತಿಯಡಿ ಉಪ್ಪಾರ ಸಮಾಜವನ್ನು ಎಸ್ಟಿಗೆ ಸೇರಿಸಲು ಆಗಿನ ಸರಕಾರಕ್ಕೆ ಒತ್ತಡ ತಂದರು ಎಂದು ಸ್ವಾಮೀಜಿ ತಿಳಿಸಿದರು.
ಚಾಮರಾಜನಗರ ಶಾಸಕ ಪುಟ್ಟರಂಗ ಶೆಟ್ಟರು, ಉಪಮೇಯರ್ ಮಂಜಮ್ಮ, ಮಾಜಿ ರಾಜ್ಯಾಧ್ಯಕ್ಷ ತುರ್ಚಘಟ್ಟ ಬಸವರಾಜಪ್ಪ, ಜಿಲ್ಲಾ ಅಧ್ಯಕ್ಷ ಎಚ್. ತಿಪ್ಪಣ್ಣ, ಪ್ರಮುಖ ವೆಂಕೋಬ, ಭೀಮಪ್ಪ, ಭರಮಣ್ಣ ಉಪ್ಪಾರ, ಎಚ್.ತಿಪ್ಪಣ್ಣ, ವೀಣಾ ಶ್ರೀನಿವಾಸ, ಜಿ.ಕೆ.ಗಿರೀಶ್ ಉಪ್ಪಾರ್, ಉಮೇಶ್ ಬಾಬು, ಮತ್ತಿ ಹನುಮಂತಪ್ಪ, ಲಕ್ಷಣ್ ಉಪ್ಪಾರ್, ಎಂ.ಯೋಗಿಶ್, ಬಸವರಾಜ್ ಸಾಗರ್, ಕೆ.ಬಿ. ಗಿರೀಶ್, ಎನ್.ಎಸ್.ಚಂದ್ರಪ್ಪ, ಎನ್.ಸುನೀಲ್‌ಕುಮಾರ್, ಎಚ್.ಗುರುರಾಜ್, ಸಿದ್ದಲಿಂಗಪ್ಪಬಾತಿ, ಎ.ಎಸ್. ಬಸವರಾಜಪ್ಪ, ಹನುಮಂತಪ್ಪ, ಎಸ್.ಬಂಗಾರಪ್ಪ, ಬಿ.ಆರ್. ಷಣ್ಮುಖಪ್ಪ, ಡಿ.ಶ್ರೀನಿವಾಸ್, ಎಂ.ಎನ್. ಲೋಕೇಶ್, ಹಳ್ಳಿಹೈದ ಪ್ಯಾಟಿಗೆ ಬಂದ ವಿಜೇತ ಶಿವಕುಮಾರ್ ಉಪ್ಪಾರ್ ಇತರರು ಇದ್ದರು.