ಲಾರಿ ಮುಷ್ಕರ

Update: 2017-10-09 18:09 GMT

ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶಾದ್ಯಂತ ಭಾರೀ ಲಾರಿ ಮುಷ್ಕರ ಆರಂಭವಾಗಿರುವ ಪರಿಣಾಮ ಸರಕು ಸಾಗಣೆಯಲ್ಲಿ ವ್ಯತ್ಯಯ ಉಂಟಾಗಿದೆ. ಅವೈಜ್ಞಾನಿಕ ಸರಕು ಸಾಗಣೆ ಸೇವಾ ತೆರಿಗೆ ಜಾರಿ ವಿರೋಧಿಸಿ ಮತ್ತು ಡೀಸೆಲ್ ದರ ಕಡಿಮೆ ಮಾಡುವುದು ಟೋಲ್ ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ಮತ್ತು ಬುಧವಾರ ದೇಶಾದ್ಯಂತ ಲಾರಿ ಮುಷ್ಕರಕ್ಕೆ ಕರೆ ಕೊಟ್ಟಿದ್ದು ಹೆದ್ದಾರಿಗಳಲ್ಲಿ ಲಾರಿ ಸಂಚಾರ ಸ್ಥಗಿತಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor