ಮಂಡ್ಯ: ಕಬ್ಬಿನ ಗದ್ದೆಯಲ್ಲಿ ಹೆಬ್ಬಾವು ಪತ್ತೆ
Update: 2017-10-11 19:26 IST
ಮಂಡ್ಯ, ಅ.11: ಕೆ.ಆರ್.ಪೇಟೆ ತಾಲೂಕಿನ ಕುಂದನಹಳ್ಳಿ ಬಳಿ ಕಬ್ಬಿನ ಗದ್ದೆಯಲ್ಲಿ ಸುಮಾರು 60 ಕೆ.ಜಿ. ತೂಕದ ಹೆಬ್ಬಾವು ಬುಧವಾರ ಪತ್ತೆಯಾಗಿದೆ.
ಶಿವಕುಮಾರ್ ಅವರ ಕಬ್ಬು ಕಟಾವು ಮಾಡುವ ಸಂದರ್ಭ ಕೂಲಿ ಕಾರ್ಮಿಕನಿಗೆ ಈ ಹೆಬ್ಬಾವು ಕಾಣಿಸಿಕೊಂಡಿದ್ದು, ಕೂಡಲೇ ಗದ್ದೆ ಮಾಲಕ ಶಿವಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಅರಣ್ಯಾಧಿಕಾರಿ ರವೀಂದ್ರ ಅವರು ಹಾವು ಹಿಡಿಯುವ ಸ್ನೇಕ್ ಮುನ್ನ ಜತೆ ಸ್ಥಳಕ್ಕೆ ಭೇಟಿ ನೀಡಿ ಹಾವನ್ನು ವಶಕ್ಕೆ ಪಡೆದು ಮೇಲುಕೋಟೆ ಅರಣ್ಯಕ್ಕೆ ಬಿಡಲಾಯಿತು.