ಹಿಂದೂಸ್ತಾನ್ ಟೈಮ್ಸ್‌ನ ಮಾಜಿ ಉದ್ಯೋಗಿಯ ಮೃತದೇಹ ಪತ್ತೆ

Update: 2017-10-12 17:36 GMT

ಹೊಸದಿಲ್ಲಿ, ಅ. 12: ಹಿಂದೂಸ್ತಾನ್ ಟೈಮ್ಸ್‌ನ ಉದ್ಯೋಗಿಗಳು ಕಳೆದ 13 ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿರುವ ಕಚೇರಿ ಕಟ್ಟಡದ ಹೊರ ಭಾಗದಲ್ಲಿ ಸಂಸ್ಥೆಯ ಮಾಜಿ ಉದ್ಯೋಗಿಯೋರ್ವರ ಮೃತದೇಹ ಗುರುವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹ ಸಂಸ್ಥೆಯ ಮಾಜಿ ಉದ್ಯೋಗಿ ರವೀಂದ್ರ ಠಾಕೂರ್ ಅವರದ್ದು ಎಂದು ಗುರುತಿಸಲಾಗಿದೆ. 2004ರಲ್ಲಿ ಇವರನ್ನು ಉದ್ಯೋಗದಿಂದ ವಜಾಗೊಳಿಸಲಾಗಿತ್ತು. ಹೊಸದಿಲ್ಲಿಯ ಕಸ್ತೂರ್ಬಾ ಗಾಂಧಿ ಮಾರ್ಗದಲ್ಲಿರುವ ಸಂಸ್ಥೆಯ ಕಟ್ಟಡದ ಹೊರಭಾಗ ದಲ್ಲಿ ಉದ್ಯೋಗಿಗಳು ಕಳೆದ 13 ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ 55 ವರ್ಷದ ರವೀಂದ್ರ ಠಾಕೂರ್ ಬಗ್ಗೆ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅನಂತರ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯ ಲಾಯಿತು. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಆದಾಗ್ಯೂ, ಡಿಸಿಪಿ (ಹೊಸದಿಲ್ಲಿ) ಬಿ.ಕೆ. ಸಿಂಗ್ ಯಾವುದೇ ಕರೆ ಹಾಗೂ ಸಂದೇಶಗಳಿಗೆ ಪ್ರತಿಕ್ರಿಯಿಸಿಲ್ಲ.

ಕಳೆದ 13 ವರ್ಷಗಳಿಂದ ಉದ್ಯೋಗಿಗಳು ಕಟ್ಟಡದ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಬುಧವಾರ ರಾತ್ರಿ ಠಾಕೂರ್ ಮಾತ್ರ ಪ್ರತಿಭಟನೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News