ಮಂಡ್ಯ: ಮಗನನ್ನು ಬಿಟ್ಟು ಕಾಣೆಯಾದ ಪೋಷಕರು!
Update: 2017-10-12 23:14 IST
ಮಂಡ್ಯ, ಅ.12: ಜಿಲ್ಲೆಯ ಮೇಲುಕೋಟೆ ಚಲುವರಾಯಸ್ವಾಮಿ ದೇವಸ್ಥಾನಕ್ಕೆ ಗುರುವಾರ ಆಗಮಿಸಿದ್ದ ದಂಪತಿಯೊಂದು ಮಗನನ್ನು ಬಿಟ್ಟು ನಾಪತ್ತೆಯಾಗಿದ್ದಾರೆ.
ಪೋಷಕರಿಗೆ ಹುಡುಕಾಡುತ್ತಿದ್ದ ಬಾಲಕರನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಲಕ ತನ್ನ ಹೆಸರು ಮನೋಜ್(11) ಎಂದು ತಿಳಿದು ಬಂದಿದೆ.
ತಾನು ಊಟಿಯಲ್ಲಿ ಓದುತ್ತಿದ್ದು, ತಮ್ಮ ಮನೆ ಬೆಂಗಳೂರಿನ ಆವಲಹಳ್ಳಿಯ ವೆಂಕಟೇಶ್ವರ ಚಿತ್ರಮಂದಿರದ ಬಳಿ ಇದೆ. ತಾನು ತಂದೆ ರವಿ, ತಾಯಿ ವನಜ, ಅಕ್ಕನೊಂದಿಗೆ ಇಲ್ಲಿಗೆ ಬಂದಿದ್ದೆ ಎಂದು ಹೇಳುತ್ತಿದ್ದಾನೆ. ಆದರೆ, ತಮ್ಮ ಪುತ್ರ ಸಿಗದಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿಲ್ಲ. ಉದ್ದೇಶಪೂರ್ವಕವಾಗಿ ಮಗನನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂಬ ಶಂಕೆಯಿದ್ದು, ಈ ಸಂಬಂಧ ಮೇಲುಕೋಟೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.