ಕೇಂದ್ರ ಸರಕಾರದ ಜಿಎಸ್‍ಟಿ ತೆರಿಗೆ ವಿರೋಧಿಸಿ ಕಟ್ಟಡ ಕಾರ್ಮಿಕರ ಧರಣಿ

Update: 2017-10-12 18:13 GMT

ಮಂಡ್ಯ, ಅ.10: ಜಿಎಸ್‍ಟಿ, ನೋಟು ಅಮಾನ್ಯೀಕರಣ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಟ್ಟಡ ಕಾರ್ಮಿಕರು ಗುರುವಾರ ನಗರದಲ್ಲಿ ಧರಣಿ ನಡೆಸಿದರು.

ರಾಜ್ಯವ್ಯಾಪಿ ನಡೆಯುವ ಧರಣಿ ಹಿನ್ನೆಲೆಯಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಮನವಿ ಸಲ್ಲಿಸಿದ ಧರಣಿನಿರತರರು, ಕೇಂದ್ರದ ಜಿಎಸ್‍ಟಿ, ನೋಟು ಅಮಾನ್ಯೀಕರಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಧರಣಿನಿರತರರು ಮಾತನಾಡಿ, ಮರಳು ಕಡಿತ, ಜಿಎಸ್‍ಟಿ, ನೋಟು ಅಮಾನ್ಯೀಕರಣದಂತಹ ಕ್ರಮಗಳಿಂದ ಕಟಟಡ ಕಾರ್ಮಿಕರ ಬದುಕು ದುಸ್ತರವಾಗುತ್ತಿದೆ. ಉದ್ಯೋಗ ಕಡಿತವಾಗುತ್ತಿದೆ. ಅಗತ್ಯವಸ್ತುಗಳ ದರ ಹೆಚ್ಚಾಗುತ್ತಿದೆ ಎಂದು ಅವರು ಕಿಡಿಕಾರಿದರು.

ಜಿಎಸ್‍ಟಿಯಿಂದ ದೊಡ್ಡ ದೊಡ್ಡ ಕಂಪನಿಗಳಿಗೆ ಲಾಭವಾಗತ್ತಿದ್ದು, ಬಡವರ ಮೇಲೆ ತೆರಿಗೆ ಹಾಕಿ ಶ್ರೀಮಂತರಿಗೆ ವಿನಾಯಿತಿ ನೀಡುವುದು ಪ್ರಧಾನಿ ಮೋದಿ ಅವರ ಉದ್ದೇಶವಾಗಿದೆ ಎಂದು ಆರೋಪಿಸಿದರು.

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಸೆಸ್ ನುಂಗಿಹಾಕುವ ಜಿಎಸ್‍ಟಿ ಬೇಡ. ನೋಟು ಅಮಾನ್ಯೀಕರಣದಿಂದ ಆದ ನಷ್ಟ ಪರಿಹಾರ ನೀಡಬೇಕು. ಮರಳು ಕೊರತೆ ನೀಗಿಸಬೇಕು. ಧನಸಹಾರ ಠೇವಣಿ ನಿರ್ಧಾರ ಕೈಬಿಡಬೇಕು. ಕನಿಷ್ಠ 3 ಸಾವಿರ ರೂ. ಪಿಂಚಣಿ ನಿಗದಿಪಡಿಸಿ, ಮರಣ ಪರಿಹಾರವನ್ನು 5 ಲಕ್ಷ ರೂ.ಗೆ ಹಚ್ಚಿಸಬೇಕು. ವಿದ್ಯಾರ್ಥಿ ವೇತನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News