ಶಿವಮೊಗ್ಗ: ಪೊಲೀಸ್ ಅಧಿಕಾರಿಗಳ ವರ್ಗಾವಣೆ
ಶಿವಮೊಗ್ಗ, ಅ.13: ಶಿವಮೊಗ್ಗ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಭಾರೀ ವರ್ಗಾವಣೆ ನಡೆದಿದೆ. ಶಿವಮೊಗ್ಗ ಉಪ ವಿಭಾಗದ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಸಹಿತ ಹಲವು ಪೊಲೀಸ್ ಇನ್‌ಸ್ಪೆಕ್ಟರ್ ಮತ್ತು ಸಬ್‌ಇನ್‌ಸ್ಪೆಕ್ಟರ್‌ಗಳನ್ನು ವರ್ಗಾಯಿಸಲಾಗಿದೆ.
ಮಂಜುನಾಥ ಶೆಟ್ಟಿ ಅವರನ್ನು ಮಂಗಳೂರು ಟ್ರಾಫಿಕ್ ಡಿವೈಎಸ್ಪಿಯನ್ನಾಗಿ ವರ್ಗಾಯಿಸಲಾಗಿದ್ದು, ಅವರ ಸ್ಥಾನಕ್ಕೆ ಪಿ. ಎಸ್. ಸುದರ್ಶನ ಅವರನ್ನು ನೇಮಿಸಲಾಗಿದೆ.
ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ: ಶಿಕಾರಿಪುರ ಸಿಪಿಐ ಆಗಿ ಪಿ.ಎಸ್. ಬಸವರಾಜ್ ಅವರನ್ನು ನೇಮಿಸಲಾಗಿದೆ. ಸಾಗರ ನಗರಕ್ಕೆ ಕೆ. ರಮೇಶ್ ಅವರನ್ನು ನೇಮಿಸಲಾಗಿದೆ. ಶಿವಮೊಗ್ಗ ಡಿಎಸ್‌ಬಿ ಸಿಪಿಐ ಮಂಜುನಾಥ ಅವರನ್ನು ಸಾಗರ ಗ್ರಾಮಾಂತರಕ್ಕೆ ವರ್ಗಾಯಿಸಲಾಗಿದೆ. ಡಿಎಸ್‌ಬಿಯ ಇನ್ನೊಬ್ಬ ಸಿಪಿಐ ಮುತ್ತನಗೌಡ ಅವರನ್ನು ಹಾವೇರಿ ನಗರಕ್ಕೆ ಮತ್ತು ಉತ್ತರ ಕನ್ನಡ ಡಿಎಸ್‌ಬಿಯಲ್ಲಿದ್ದ ಗಣಪತಿ ಅವರನ್ನು ಶಿವಮೊಗ್ಗ ಡಿಎಸ್‌ಬಿಗೆ ವರ್ಗಾಯಿಸಲಾಗಿದೆ.
ಎಸ್ಸೈಗಳ ವಗಾವಣೆ: ಶಿವಮೊಗ್ಗ ಗ್ರಾಮಾಂತ ರದಲ್ಲಿದ್ದ ಎಸ್ಸೈ ಎಸ್.ಎಂ.ಉಮೇಶ್‌ಕುಮಾರ್ ಅವರನ್ನು ಹರಪನಹಳ್ಳಿಗೆ ವರ್ಗಾಯಿಸಲಾಗಿದೆ. ಅವರ ಸ್ಥಾನಕ್ಕೆ ದಾವಣ ಗೆರೆಯ ಟ್ರಾಫಿಕ್ ಎಸ್ಸೈ ಸೈಯದ್ ದಾದಾ ನೂರ್‌ಅಹ್ಮದ್ ಅವರನ್ನು ನೇಮಿಸಲಾಗಿದೆ. ಭದ್ರಾವತಿ ಹೊಸಮನೆ ಠಾಣೆಯ ಎಸ್ಸೈ ಜಿ. ಡಿ. ವೆಂಕಟೇಶ್ ಅವರನ್ನು ಚಳ್ಳಕೆರೆಗೆ ವರ್ಗಾಯಿಸಲಾಗಿದೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.