ಚಿಕ್ಕಮಗಳೂರು: ಮಾತೃಪೂರ್ಣ ಯೋಜನೆಗೆ ಚಾಲನೆ
Update: 2017-10-13 23:05 IST
ಚಿಕ್ಕಮಗಳೂರು, ಅ.13: ಗರ್ಭಿಣಿ ಮತ್ತು ಬಾಣಂತಿಯರು ಅಪೌಷ್ಟಿಕತೆಯಿಂದ ಬಳಲ ಬಾರದು ಎನ್ನುವ ಉದ್ದೇಶದಿಂದ ರಾಜ್ಯ ಸರಕಾರ ಮಾತೃಪೂರ್ಣ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಭ್ಯಾಗದವಳ್ಳಿ ಗ್ರಾಪಂ ಸದಸ್ಯೆ ಲೀಲಾ ತಿಳಿಸಿದರು.
ಅವರು ಶುಕ್ರವಾರ ನಗರದ ಭ್ಯಾಗದಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮಾತೃಪೂರ್ಣ ಯೋಜನೆಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಂಗನವಾಡಿ ಕೇಂದ್ರದಲ್ಲಿ ನೀಡುವ ಪೌಷ್ಟ್ಠಿಕ ಆಹಾರ ಸೇವಿಸುವದರ ಜೊತೆಗೆ ಮಗುವಿಗೆ ಪೌಷ್ಟಿಕಾಂಶ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬಾಲವಿಕಾಸ ಸಮಿತಿ ಸದಸ್ಯರಾದ ದೀಪಾಯೋಗಿಶ್, ಸೋಮಶೇಖರ್, ರವಿ, ಗೋಪಾಲಕೃಷ್ಣ ಅಂಗನವಾಡಿ ಕಾರ್ಯಕರ್ತೆ ಸಾವಿತ್ರಮ್ಮ, ಸಹಾಯಕಿ ಸೀತಮ್ಮ ಹಾಗೂ ಸ್ಥಳಿಯ ಗ್ರಾಮಸ್ಥರು ಭಾಗವಹಿಸಿದ್ದರು.