×
Ad

ದಾವಣಗೆರೆ: ಸಚಿವ ರೋಷನ್ ಬೇಗ್ ವಿರುದ್ಧ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ

Update: 2017-10-14 21:19 IST

ದಾವಣಗೆರೆ, ಅ.13: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ಬಿಜೆಪಿ ಯುವ ಮೋರ್ಚಾದ ವತಿಯಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಸಚಿವ ರೋಷನ್ ಬೇಗ್ ಅವರ ಭಾವಚಿತ್ರವನ್ನು ಕಾಲಿನಲ್ಲಿ ತುಳಿದು ಆಕ್ರೋಶ ವ್ಯಕ್ತಪಡಿಸಿ, ಪ್ರಧಾನ ಮೋದಿಯವರೆಗೆ ಅವಹೇಳನ ಕಾರಿಯಾಗಿ ನಿಂದಿಸಿರುವ ಸಚಿವ ರೋಷನ್ ಬೇಗ್ ಈ ಕೂಡಲೇ ಕ್ಷಮೆ ಕೇಳಬೇಕು ಹಾಗೂ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಸಿ. ಶ್ರೀನಿವಾಸ್, ಎನ್. ರಾಜಶೇಖರ್, ರಾಜನಹಳ್ಳಿ ಶಿವಕುಮಾರ್, ಸೋಗಿ ಶಾಂತಕುಮಾರ್, ಎನ್. ಶಿವಪ್ರಕಾಶ್, ವಿರೇಶ್ ಪೈಲ್ವಾನ್, ಶಿವನಗೌಡ ಪಾಟೀಲ್, ಸಂತೋಷ್, ನರೇಶ್, ತರಕಾರಿ ಶಿವು, ಗೌತಮ್ ಜೈನ್, ಧನುಷ್ ರೆಡ್ಡಿ, ಎಚ್.ಎನ್. ಜಗದೀಶ್, ಮುಕುಂದಪ್ಪ, ಪ್ರಸನ್ನ ಮತ್ತಿತರರು ಇದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News