ಪೆರಿಯಾರ್ ಅವರು ಮೌಢ್ಯತೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿದರು: ಡಾ.ರವಿಕುಮಾರ್ ನೀಹಾ
ತುಮಕೂರು, ಅ.14: ತಮಿಳುನಾಡಿನ ವೈಚಾರಿಕ ಸ್ವಾಭಿಮಾನಿ ಚಳವಳಿಯನ್ನು ಮುನ್ನೆಡೆಸಿದವರಲ್ಲಿ ರಾಮುಸ್ವಾಮಿ ಪೆರಿಯಾರ್ ಪ್ರಮುಖರಾಗಿದ್ದಾರೆ ಎಂದು ವಿಮರ್ಶಕ ಡಾ.ರವಿಕುಮಾರ್ ನೀಹಾ ತಿಳಿಸಿದ್ದಾರೆ.
ಗೌತಮ ಬುದ್ದ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ತುಮಕೂರು ನಗರದ ಗಂಗೋತ್ರಿ ಮಹಿಳಾ ವಿದ್ಯಾರ್ಥಿ ನಿಲಯದಲ್ಲಿ ಶ್ರೀವಾಲ್ಮಿಕಿ ಜಯಂತಿ ಹಾಗೂ ತಂದೆ ಪರಿಯಾರ್ ರಾಮಸ್ವಾಮೀ ನಾಯಕ್‍ರ ಜಯಂತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತಿದ್ದ ಅವರು, ತಮಿಳುನಾಡಿನ ರಾಜಕೀಯ ವ್ಯವಸ್ಥೆಯಲ್ಲಿ ಎರಡು ರಾಜಕೀಯ ಪಕ್ಷಗಳು ಇದ್ದು, ಅವುಗಳು ತಮಿಳುನಾಡಿನ ಅಭಿವೃದ್ಧಿಯಲ್ಲಿ ರಾಮಸ್ವಾಮಿನಾಯ್ಕರವರ ಸಿದ್ಧಾಂತವಿದೆ. ದ್ರಾವಿಡ ಮುನ್ನೇತ್ರ ಕಳಗಂ ಎಂಬ ಸಂಘಟನೆ ಮಾಡಿಕೊಂಡು ಮೌಢ್ಯತೆಯನ್ನು, ಪೂಜೆಗಳು, ಯಜ್ಞಾಗಳು, ಹೋಮಗಳು, ದೇವರುಗಳನ್ನು ವಿರೋಧಿಸಿ ಜನರಲ್ಲಿ ಜಾಗೃತಿ ಮೂಡಿಸಿದರು ಎಂದು ನುಡಿದರು.
ಉಪನ್ಯಾಸಕ ಕೊಟ್ಟ ಶಂಕರ್ ಮಾತನಾಡಿ, ಗೌತಮಬುದ್ದ, ಬಸವಣ್ಣ, ಜೋತಿಬಾಪುಲೆ, ಸಾವಿತ್ರಿ ಬಾಯಿಪುಲೆ ಹಾಗೂ ಪೆರಿಯಾರ್ ನಮಗೆ ಆದರ್ಶವಾಗಬೇಕು. ನಿಮ್ಮ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳಲು ಶಿಕ್ಷಣ ಪಡೆಯಬೇಕು. ಈ ದೇಶದಲ್ಲಿ ರಾಮಯಾಣ, ವಾಲ್ಮೀಕಿ ಬರೆದರು, ಮಹಾಭಾರತ ವ್ಯಾಸರಾಯರು ಬರೆದರು. ಈ ದೇಶಕ್ಕೆ ಸಂವಿಧಾನ ಡಾ. ಬಿ.ಆರ್.ಅಂಬೇಡ್ಕರ್ ಬರೆದರು. ಇವರೆಲ್ಲರೂ ಶೋಷಿತ ಸಮುದಾಯದಿಂದ ಬಂದವರಾಗಿದ್ದಾರೆ. ಅವರ ರೀತಿ ನೀವುಗಳು ವಿದ್ಯಾವಚಿತರಾಗಿ ದೇಶದ ಉತ್ತಮ ಪ್ರಜೆಗಳಾಗಬೇಕೆಂದರು.
ಉಪನ್ಯಾಸಕ ರಂಗಧಾಮಯ್ಯ ಮಾತನಾಡಿ, ನಾವು ರಾಷ್ಟ್ರವನ್ನು ಪ್ರಭುದ್ದ ಭಾರತವನ್ನು ಕಟ್ಟುವ ನಿಟ್ಟಿನಲ್ಲಿ ಕೆಲಸ ಮಾಡುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ.ಮಿಸಲಾತಿಯ ಋಣವನ್ನು ತಿಂದ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಗಳು “ಪೇ ಬ್ಯಾಕ್‍ಟು ದ ಸೊಸೈಟಿ ಗೊ ಬ್ಯಾಕ್ ಟು ದ ಸೊಸೈಟಿ” ಎನ್ನುವ ಅಂಬೇಡ್ಕರ್‍ರವರ ತತ್ವದ ಅಡಿಯಲ್ಲಿ ನಾವು ಸಾಮಾನ್ಯ ಜನರಿಗೆ ಸಹಾಯ ಮಾಡಬೇಕು. ಮೌಢ್ಯತೆ ಮೂಡನಂಬಿಕೆಗಳು, ಕಂದಚಾರಗಳಿಗೆ ಬಲಿಯಾಗಬಾರದು ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶಮೀಮುನ್ನಿಸಾ,ನಿಲಯಪಾಲಕಿ ಸುಧಾ, ರಾಜಣ್ಣ ಪ್ರತಿಭಾ, ಮೂರ್ತಿ ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.