×
Ad

ಮಲೆನಾಡು ವಿದ್ಯಾ ಸಂಸ್ಥೆಯಲ್ಲಿ ಬ್ಯಾಂಕ್ ಉದ್ಯೋಗಕ್ಕಾಗಿ ತರಬೇತಿ

Update: 2017-10-16 17:26 IST

ಚಿಕ್ಕಮಗಳೂರು. ಅ.16: ಬ್ಯಾಂಕ್ ಉದ್ಯೋಗಕ್ಕಾಗಿ ತರಬೇತಿ ತರಗತಿಗಳಿಗೆ ಬರುವ ವಿದ್ಯಾರ್ಥಿಗಳ ಸುಲಭ ಕಲಿಕೆಗಾಗಿ ಮುದ್ರಿಸಿರುವ ಪುಸ್ತಕಗಳನ್ನು ಮಲೆನಾಡು ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಹಾಗೂ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್ ಸೋಮವಾರ ಎಂಇಎಸ್‍ನಲ್ಲಿ ಬಿಡುಗಡೆಗೊಳಿಸಿದರು.
  ನಂತರ  ಡಾ.ಡಿ.ಎಲ್.ವಿಜಯಕುಮಾರ್ ಮಾತನಾಡಿ, ಮಲೆನಾಡು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ಪ್ರಾರಂಭಿಸಲ್ಪಟ್ಟಿರುವ ಛೇಂಬರ್ ಆಫ್ ಕಾಮರ್ಸ್‍ನ ವತಿಯಿಂದ ಬ್ಯಾಂಕ್ ಉದ್ಯೋಗಕ್ಕಾಗಿ ತರಬೇತಿ ತರಗತಿಗಳಿಗೆ ಬರುವ ವಿದ್ಯಾರ್ಥಿಗಳ ಸುಲಭ ಕಲಿಯುವಿಕೆಗಾಗಿ ಈ ಪುಸ್ತಕಗಳನು ಮುದ್ರಿಸಲಾಗಿದೆ. ಮಲೆನಾಡು ವಿದ್ಯಾ ಸಂಸ್ಥೆಯು ಪ್ರತೀ ಶೈಕ್ಷಣಿಕ ವರ್ಷವೂ ಸಹ ಒಂದೊಂದು ಹೊಸ ರೀತಿಯ ತರಗತಿಗಳನ್ನು ಪ್ರಾರಂಭಿಸುತ್ತಿದೆ ಎಂದು ಹೇಳಿದರು. 

ಹಲವು ವಿದ್ಯಾರ್ಥಿನಿಯರು ಈ ತರಬೇತಿಯ ಉಪಯೋಗವನ್ನು ಪಡೆಯುತ್ತಿದ್ದಾರೆ. ಬೇರೆ ಊರುಗಳಿಗೆ ಹೋಗಿ ಅಲ್ಲಿ ಈ ತರಬೇತಿಯನ್ನು ಪಡೆಯಲು ತಗಲುವ ವೆಚ್ಚವನ್ನು ಅನೇಕ ವಿದ್ಯಾರ್ಥಿನಿಯರು ಭರಿಸಲಾಗುವುದಿಲ್ಲ ಎಂಬ ವಿಚಾರವನ್ನು ಮನಗಂಡ ಸಂಸ್ಥೆ ಅತೀ ಕಡಿಮೆ ವೆಚ್ಚದಲ್ಲಿ ಈ ತರಬೇತಿಯನ್ನು ನೀಡಲು ಮುಂದಾಗಿದೆ. ಜೊತೆಗೆ ಶಿಕ್ಷಣ ಸಾಮಾಗ್ರಿಯನ್ನು ಸಹ ಒದಗಿಸುತ್ತಿದೆ ಎಂದರು.

ನವೆಂಬರ್ 2017ರಿಂದ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಹೊಸ ಮಾದರಿಯಲ್ಲಿ ಸಿ.ಪಿ.ಟಿ. ತರಬೇತಿಯನ್ನು ಪ್ರಾರಂಭಿಸಲಾಗುತ್ತಿದೆ ಮತ್ತು ಸ್ನಾತಕೋತ್ತರ ಪದವಿಯ(ಎಂ.ಬಿ.ಎ) ಪ್ರವೇಶ ಪರೀಕ್ಷೆಗಳಿಗೂ ಸಹ ತರಬೇತಿ ನೀಡಲಾಗುತ್ತದೆ ಎಂಬುದಾಗಿ ತಿಳಿಸಿದರು.

ಛೇಂಬರ್ ಆಫ್ ಕಾಮರ್ಸ್ ಕಾರ್ಯದರ್ಶಿ ಕೆ.ಎನ್.ಮಂಜುನಾಥಭಟ್ ಮಾತನಾಡಿದರು. ಎಂಇಎಸ್‍ಎಂಎಸ್‍ಪಿಎಸ್ ಪದವಿ ಕಾಲೇಜು ಪ್ರಾಂಶುಪಾಲ ಡಾ.ಹೆಚ್. ವಿಷ್ಣುವರ್ಧನ್, ಸಂಸ್ಥೆಯ ಆಡಳಿತಾಧಿಕಾರಿ ಶ್ರೀಮತಿ ಎಸ್.ಶಾಂತಕುಮಾರಿ, ಎಸ್‍ಎಸ್‍ಎಂ ಪಿಯು ಕಾಲೇಜಿನ ಪ್ರಾಂಶುಪಾಲ ಶ್ರೀಮತಿ ಜಯಶ್ರೀ, ವಾಣಿಜ್ಯ ವಿಭಾಗದ ಮುಖ್ಯಸ್ಥರುಗಳಾದ ಅವಿನಾಶ್, ಕು.ಫಾತಿಮಾ ಶಿರೀನ್ ಹಾಗೂ ಶ್ರೀಮತಿ ರಾಮಿಯಾ ಬರೀನ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News