ಮೋದಿ ವಿರುದ್ದ ಅಶ್ಲೀಲ ಹೇಳಿಕೆ ಖಂಡಿಸಿ ಸಚಿವರ ಪ್ರತಿಕೃತಿ ದಹನ
ಬಣಕಲ್, ಅ.16:ಪ್ರಧಾನಿ ಮೋದಿಯವನ್ನು ಅವಹೇಳನ ಮಾಡುವುದು ದೇಶಕ್ಕೆ ಮಾಡುವ ಅಪಮಾನವಾಗಿದೆ. ಪ್ರಧಾನಿಯನ್ನು ಅವಹೇಳನ ಮಾಡಿರುವ ರೋಷನ್‍ಬೇಗ್ ಕ್ಷಮೆಗೆ ಅರ್ಹರಲ್ಲ. ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಆರ್‍ಎಸ್‍ಎಸ್‍ನ ಹಿರಿಯ ಸ್ವಯಂ ಸೇವಕ ರಾಮಕೃಷ್ಣ ಕಾರಂತ ಹೇಳಿದರು.
ಅವರು ಸೋಮವಾರ ಬಣಕಲ್ ಪಟ್ಟಣದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳ ಬಗ್ಗೆ ಸಚಿವರಾಗಿ ಅವಹೇಳನಕಾರಿಯಾಗಿ ಮಾತನಾಡಿರುವುದು ಜನತೆಗೆ ನಾಡಿರುವ ಅವಮಾನ. ನಾಲಿಗೆಯ ಮೇಲೆ ಹಿಡಿತವಿಲ್ಲದ ರೋಷನ್‍ಬೇಗ್ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವುದು ನಮಗೆ ಬೇಕಿಲ್ಲ. ಜಿಲ್ಲೆಗೆ ಇವರ ಬದಲು ಬೇರೆ ಉಸ್ತುವಾರಿ ಸಚಿವರನ್ನು ರಾಜ್ಯ ಸರ್ಕಾರ ನೇಮಿಸಲಿ ಎಂದರು.
ಬಿಜೆಪಿಯ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗಜೇಂದ್ರ ಮಾತನಾಡಿ, ರೋಷನ್ ಬೇಗ್ ಅವರಿಗೆ ಸಚಿವ ಸ್ಥಾನದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ. ಸಾರ್ವಜನಿಕವಾಗಿ ಅವಹೇಳನಕಾರಿಯಾಗಿ ಮಾತನಾಡುವ ನಾಲಿಗೆಯ ಮೇಲೆ ಹಿಡಿತ ಇಲ್ಲದ ರೋಷನ್ ಬೇಗ್ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು ಎಂಉ ಹೇಳಿದರು.
ಬಣಕಲ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು, ರೋಷನ್ ಬೇಗ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಬಣಕಲ್‍ನ ಪ್ರಮುಖ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.
ಬಿಜೆಪಿ ತಾಲ್ಲೂಕು ಉಪಾಧ್ಯಕ್ಷ ಬಿ.ಎಂ ಭರತ್, ಬಣಕಲ್ ಹೋಬಳಿ ಬಿಜೆಪಿ ಅಧ್ಯಕ್ಷ ಅನುಕುಮಾರ್, ಜಿಪಂ ಸದಸ್ಯ ಶಾಮಣ್ಣ, ಜಿಲ್ಲಾ ಯುವಾಮೋರ್ಚಾ ಪ್ರಧಾನ ಕಾರ್ಯದರ್ಶಿ ಧನಿಕ್, ಬಾಳೂರು ಹೋಬಳಿ ಅಧ್ಯಕ್ಷ ಶಿವರಾಜ್, ಬಣಕಲ್ ಹೋಬಳಿ ಪ್ರಧಾನ ಕಾರ್ಯದರ್ಶಿ ಅಭಿಲಾಷ್, ಬಾಳೂರು ಹೋಬಳಿ ಪ್ರಧಾನ ಕಾರ್ಯದರ್ಶಿ ಬಿ.ಬಿ.ಮಂಜುನಾಥ್, ತಾಲ್ಲೂಕು ಎಸ್ಟಿ ಮೋರ್ಚಾ ತಾಲ್ಲೂಕು ಅಧ್ಯಕ್ಷ ರಘುಪತಿ, ಬಣಕಲ್ ಗ್ರಾ.ಪಂ ಅಧ್ಯಕ್ಷ ಸುರೇಶ್, ತ್ರಿಪುರ ಗ್ರಾ.ಪಂ ಅಧ್ಯಕ್ಷ ರಘು, ಬಿಜೆಪಿ ಮುಖಂಡರಾದ ಕಲ್ಲೇಶ್, ಸುರೇಶ್ ಶೆಟ್ಟಿ, ಮಹೇಶ್, ರಮೇಶ್, ನಂದನ್ ನಿಡ್ನಳ್ಳಿ, ಕವೀಶ್, ವಿನಯ್, ಆದರ್ಶ್ ಮತ್ತಿತರರಿದ್ದರು.